ಶಿವಪುರ : ಎಲ್‌ಕೆಜಿ-ಯುಕೆಜಿ ತರಗತಿ ಉದ್ಘಾಟನೆ

ಹೆಬ್ರಿ : ಶಿವಪುರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2025ನೇ ಸಾಲಿನಲ್ಲಿ ಹೊಸದಾಗಿ ಪ್ರಾರಂಭಗೊಂಡ ಎಲ್‌ಕೆಜಿ-ಯುಕೆಜಿ ತರಗತಿಯ ಉದ್ಘಾಟನೆ ಕಾರ್ಯಕ್ರಮ ಜು.28ರಂದು ಜರಗಿತು.
ಉದ್ಯಮಿ ಚಿಟ್ಟೆಬೆಟ್ಟು ಹರೀಶ್ ಶೆಟ್ಟಿ ತರಗತಿಯನ್ನು ಉದ್ಘಾಟಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ಗಿರಿಜಮ್ಮ ಉಪಸ್ಥಿತರಿದ್ದು, ಸಭಾ ಕಾರ್ಯಕ್ರಮ ಉದ್ಘಾಟಿಸಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ರಾಘವೇಂದ್ರ ಪೂಜಾರಿ ಯಡ್ದೆ ವಹಿಸಿದರು. ದಾನಿಗಳಾದ ಹರೀಶ್ ಶೆಟ್ಟಿ ಚಿಟ್ಟೆಬೆಟ್ಟು, ಮಾಹೆ ಯೂನಿವರ್ಸಟಿ ಆಫೀಸರ್ ಬಾಲಕೃಷ್ಣ ಪ್ರಭು, ಅಬ್ದುಲ್ ರೆಹಮಾನ್ ಕಾಪು, ಕರುಣಾಕರ್ ಪೂಜಾರಿ ಶಿವಪುರ, ಪ್ರೇಮಾ ಸೇರಿಗಾರ್ ದೇವಸ್ಥಾನಬೆಟ್ಟು, ಗುಡ್‌ಲಕ್ ಮಾಲಕರಾದ ಪ್ರವೀಣ್ ಹೆಗ್ಡೆ ಇವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಕಾರ್ಕಳ ತಾಲೂಕಿನ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರು ಭಾಸ್ಕರ್ ಟಿ., ಮಾಹೆ ಯೂನಿವರ್ಸಿಟಿಯ ವಾಸುದೇವ ಪ್ರಭು, ವಿಜಯೇಂದ್ರ ಹೆಗ್ಡೆ ಹೆಬ್ರಿ, ಎಸ್‌ಡಿಎಂಸಿ ಉಪಾಧ್ಯಕ್ಷೆ ಅನುಸೂಯ, ಸಿಆರ್‌ಪಿ ಪ್ರಿತೇಶ್ ಕುಮಾರ್ ಶೆಟ್ಟಿ ಹಾಗೂ ಪಂಚಾಯತ್ ಅಧ್ಯಕ್ಷರು, ಸದಸ್ಯರು, ಎಸ್‌ಡಿಎಂಸಿ ಸದಸ್ಯರು, ಪೋಷಕರು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಶಾಲಾಭಿಮಾನಿಗಳು ಉಪಸ್ಥಿತರಿದ್ದರು.

ಶಾಲಾ ಮುಖ್ಯ ಶಿಕ್ಷಕಿ ಗುಲಾಬಿ ಸ್ವಾಗತಿಸಿ, ಕಾರ್ಕಳ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ರಮಾನಂದ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಶಿಕ್ಷಕ ರವೀಂದ್ರ ಶೆಟ್ಟಿ ವಂದಿಸಿದರು.









































































































error: Content is protected !!
Scroll to Top