ರೋಟರಿ ಕ್ಲಬ್ ಕಾರ್ಕಳ – ಇಂಟರಾಕ್ಟ್ ಕ್ಲಬ್ ಪದಗ್ರಹಣ

ಕಾರ್ಕಳ : ಸುಂದರ ಪುರಾಣಿಕ್ ಸ್ಮಾರಕ ಸರಕಾರಿ ಪ್ರೌಢಶಾಲೆ ಪೆರ್ವಾಜೆಯಲ್ಲಿ ರೋಟರಿ ಕ್ಲಬ್ ಕಾರ್ಕಳ ವತಿಯಿಂದ ಇಂಟರಾಕ್ಟ್ ಕ್ಲಬ್ ಪದಗ್ರಹಣ ಸಮಾರಂಭವನ್ನು ಕ್ಲಬ್ಬಿನ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಪದಪ್ರದಾನ ಮಾಡಿದ ಅವರು ಮಾತನಾಡಿ, ಸಮುದಾಯ ಸೇವೆ ಮಾಡುವ ಬಗ್ಗೆ ನಮ್ಮಲ್ಲಿ ಕಾಳಜಿ ಇರಬೇಕು, ಕಾಲೇಜಿನ ದಿನಗಳಲ್ಲಿ ತಾನು ರೋಟರ್ಯಾಕ್ಟ್ ವತಿಯಿಂದ ಗೆಳೆಯರ ಸಹಕಾರದೊಂದಿಗೆ ಯಕ್ಷಗಾನ ಪ್ರದರ್ಶನ ಮಾಡಿ ಅದರ ಉಳಿತಾಯದ ಹಣದಿಂದ ಇದೇ ಶಾಲೆಗೆ ಪೀಠೋಪಕರಣ ನೀಡಿರುವುದನ್ನು ನೆನಪಿಸಿಕೊಂಡರು.

ನೂತನ ಅಧ್ಯಕ್ಷೆ ತೇಜಸ್ವಿನಿ ಮಾತನಾಡುತ್ತಾ ಈ ವರ್ಷದ ಕಾರ್ಯ ಚಟುವಟಿಕೆಗಳ ಮಾಹಿತಿಯೊಂದಿಗೆ ತಂಡವನ್ನು ಪರಿಚಯಿಸಿದರು. ರೋಟರಿಯ ಜಿಲ್ಲಾ ಮಾಜಿ ಗವರ್ನರ್ ಡಾ. ಭರತೇಶ್ ಆದಿರಾಜ್ ರೋಟರಿಯ ಧ್ಯೇಯೋದ್ಧೇಶಗಳ ಬಗ್ಗೆ ಮಾಹಿತಿ ನೀಡಿದರು. ಇಂಟರ್ಯಾಕ್ಟ್ ಚೇರ್ ಮ್ಯಾನ್ ಬಾಲಕೃಷ್ಣ ದೇವಾಡಿಗ ಇಂಟರಾಕ್ಟ್ ಕ್ಲಬ್ಬಿನ ವತಿಯಿಂದ ಮಾಡಬಹುದಾದ ಸಾಮಾಜಿಕ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು. ಸ್ಥಳೀಯ ಕಾಬೆಟ್ಟು ಶಾಲೆಯ ಹಳೆ ವಿದ್ಯಾರ್ಥಿ ಜಮ್ಮುವಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯೋಧ ಮರಿಯಪ್ಪನವರು ಮಾತನಾಡುತ್ತಾ ದಕ್ಷಿಣ ಕರ್ನಾಟಕದವರು ಸೈನ್ಯಕ್ಕೆ ಸೇರಿ ದೇಶ ಸೇವೆ ಮಾಡಲು ಆಸಕ್ತಿ ವಹಿಸಬೇಕೆಂದು ಹೇಳಿದರು.

ಇಂಟರ್ಯಾಕ್ಟ್ ಕ್ಲಬ್ಬಿನ ಕಾರ್ಯದರ್ಶಿ ಅಂಕಿತಾ ರೋಟರಿ ಕ್ಲಬ್ಬಿನ ಸದಸ್ಯರಾದ ವಸಂತ್ ಎಂ., ಶೇಖರ್ ಹೆಚ್., ಸುರೇಶ್ ನಾಯಕ್, ವಿಜೇಂದ್ರ ಕುಮಾರ್, ಇಕ್ಬಾಲ್ ಅಹಮದ್, ಎಸ್.ಡಿ.ಎಂ.ಸಿ ಅಧ್ಯಕ್ಷ ಆನಂದ ನಾಯಕ್, ಸದಸ್ಯರಾದ ಕೃಷ್ಣ ಮಡಿವಾಳ, ವೀಣಾ ಭಂಡಾರಿ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಮುಖ್ಯ ಶಿಕ್ಷಕ ದಿವಾಕರ್ ಸ್ವಾಗತಿಸಿದರು. ಹರ್ಷಿಣಿ ವಿಜಯರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಹರಿಶ್ಚಂದ್ರ ಬಾಯಿರಿ ಕಾರ್ಯಕ್ರಮ ನಿರೂಪಿಸಿದರು. ಮಾರ್ಗದರ್ಶಕ ಶಿಕ್ಷಕಿ ಪ್ರಜ್ಞಾ ವಂದಿಸಿದರು.









































































































error: Content is protected !!
Scroll to Top