ಚೆಸ್‌ ವಿಶ್ವಕಪ್‌ ಫೈನಲ್‌ ಪ್ರವೇಶಿಸಿದ ದಿವ್ಯಾ ದೇಶ್‌ಮುಖ್‌

ಬಟುಮಿ : ಫಿಡೆ ಮಹಿಳಾ ಚೆಸ್‌ ವಿಶ್ವಕಪ್‌ ಫೈನಲ್‌ಗೆ ಭಾರತದ ನಾಗ್ಪುರ ಮೂಲದವರಾದ ದಿವ್ಯಾ ದೇಶ್‌ಮುಖ್‌ ಲಗ್ಗೆಯಿಟ್ಟಿದ್ದಾರೆ. ಈ ಮೂಲಕ ಮಹಿಳಾ ವಿಶ್ವಕಪ್‌ನ ಫೈನಲ್‌ಗೇರಿದ ಭಾರತದ ಮೊದಲ ಆಟಗಾರ್ತಿ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. ಅಲ್ಲದೆ, 2026ರ ಕ್ಯಾಂಡಿಡೇಟ್ಸ್‌ಗೆ ಅರ್ಹತೆ ಪಡೆದಿದ್ದಾರೆ.

ಕ್ವಾರ್ಟರ್ ಫೈನಲ್‌ನಲ್ಲಿ ಭಾರತದ ಜಿಎಂ ಹರಿಕಾ ದ್ರೋಣವಲ್ಲಿಯನ್ನು ಸೋಲಿಸಿದ್ದ ದಿವ್ಯ ದೇಶಮುಖ್ ತಮ್ಮ ಮೊದಲ ಸೆಮಿಫೈನಲ್ ಪಂದ್ಯವನ್ನು ಮಾಜಿ ವಿಶ್ವ ಚಾಂಪಿಯನ್‌, ಚೀನಾದ ಟಾನ್ ಝೊಂಗಿ ವಿರುದ್ಧ 0.5-0.5 ಅಂಕಗಳೊಂದಿಗೆ ಡ್ರಾ ಮಾಡಿಕೊಂಡರು. ಬುಧವಾರ ನಡೆದ ಸೆಮಿಫೈನಲ್‌ನ 2ನೇ ಸುತ್ತಿನಲ್ಲಿ ಟಾನ್‌ ವಿರುದ್ಧ 1.5-0.5 ಅಂಕಗಳಲ್ಲಿ ಗೆಲುವು ಸಾಧಿಸಿದರು.

ಅಂತಿಮ ಸುತ್ತಿನಲ್ಲಿ ತಮ್ಮ ದೇಶದವರೇ ಆದ ಕೊನೆರು ಹಂಪಿ ಅಥವಾ ಚೀನಾದ ಲೈ ಟಿಂಗ್ಜಿಯನ್ನು ಎದುರಿಸಲಿದ್ದಾರೆ. ಭಾರತದ ಗ್ರ್ಯಾಂಡ್‌ ಮಾಸ್ಟರ್‌ ಕೊನೆರು ಹಂಪಿ ಹಾಗೂ ಅಗ್ರ ಶ್ರೇಯಾಂಕಿತೆ ಚೀನಾದ ಟಿಂಗ್‌ಜೀ ಲೀ ನಡುವೆ ನಡೆಯುತ್ತಿರುವ 2ನೇ ಸೆಮಿಫೈನಲ್‌ ಟೈ ಬ್ರೇಕರ್‌ಗೆ ಸಾಗಿದೆ. ಇಬ್ಬರ ನಡುವಿನ 2ನೇ ಸುತ್ತು ಸಹ ಡ್ರಾನಲ್ಲಿ ಕೊನೆಗೊಂಡಿತು. ಈ ಇಬ್ಬರು ಟೈ ಬ್ರೇಕರ್‌ನಲ್ಲಿ ರ್‍ಯಾಪಿಡ್‌ ಚೆಸ್‌ ಮಾದರಿಯಲ್ಲಿ ಆಡಲಿದ್ದಾರೆ. ಗೆಲ್ಲುವ ಆಟಗಾರ್ತಿ ಫೈನಲ್‌ಗೇರಲಿದ್ದಾರೆ. ಫೈನಲ್‌ ಜು. 27ರಿಂದ ಆರಂಭಗೊಳ್ಳಲಿದೆ.







































error: Content is protected !!
Scroll to Top