ತಾಲೂಕು ಆರೋಗ್ಯಾಧಿಕಾರಿ ಕಚೇರಿಯ ಹಿರಿಯ ವಾಹನ ಚಾಲಕ ದಿನೇಶ್‌ ಪ್ರಭು ವರ್ಗಾವಣೆ

ಕಾರ್ಕಳ : ಕಳೆದ 25 ವರ್ಷಗಳಿಂದ ಕಾರ್ಕಳ ತಾಲೂಕು ಆರೋಗ್ಯಾಧಿಕಾರಿ ಕಚೇರಿಯ ವಾಹನ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದ ದಿನೇಶ್‌ ಪ್ರಭು ಅವರಿಗೆ ಬೆಳ್ಮಣ್‌ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವರ್ಗಾವಣೆಯಾಗಿದೆ.

ಮೂಲತ: ಕಾಪು ತಾಲೂಕಿನ ಸಾಂತೂರು ಭರಣಿಯವರಾದ ದಿನೇಶ್‌ ಪ್ರಭು 2000 ಜೂ. 1ರಂದು ಕಾರ್ಕಳ ತಾಲೂಕು ಆರೋಗ್ಯಾಧಿಕಾರಿ ಕಚೇರಿಯ ವಾಹನ ಚಾಲಕರಾಗಿ ಗುತ್ತಿಗೆ ಆಧಾರದಲ್ಲಿ ಸೇರ್ಪಡೆಗೊಂಡು 2006ರಿಂದ ಖಾಯಂಗೊಂಡು 2021ಕ್ಕೆ ಹಿರಿಯ ವಾಹನ ಚಾಲಕರಾಗಿ ಮುಂಬಡ್ತಿ ಹೊಂದಿರುತ್ತಾರೆ.

ವರ್ಗಾವಣೆಗೊಂಡ ದಿನೇಶ್‌ ಪ್ರಭು ಅವರಿಗೆ ತಾಲೂಕು ಆರೋಗ್ಯಾಧಿಕಾರಿ ಕಚೇರಿಯಲ್ಲಿ ಜು. 17ರಂದು ಬಿಳ್ಕೋಡುಗೆ ಸಮಾರಂಭ ಜರುಗಿತು. ಈ ಸಂದರ್ಭ ಆರೋಗ್ಯಾಧಿಕಾರಿ ಸಂದೀಪ್‌ ಕುಡ್ವ, ಇರ್ವತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಯಶೋಧರ್, ತಾಲೂಕು ಸರಕಾರಿ‌ ನೌಕರರ ಸಂಘದ ಅಧ್ಯಕ್ಷ ಬಾಲಕೃಷ್ಣ ಎನ್.‌, ಕಚೇರಿಯ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.







































error: Content is protected !!
Scroll to Top