ಮಲ್ಟಿಪ್ಲೆಕ್ಸ್, ಚಿತ್ರಮಂದಿರಗಳಲ್ಲಿ ಎಲ್ಲಾ ಭಾಷೆ ಸಿನಿಮಾಗಳಿಗೆ ಏಕರೂಪ ದರ

ಬೆಂಗಳೂರು : ಮಲ್ಟಿಪ್ಲೆಕ್ಸ್ ಸೇರಿದಂತೆ ಎಲ್ಲ ಚಿತ್ರಮಂದಿರಗಳಲ್ಲಿ ಏಕರೂಪ ದರ ಜಾರಿ ಸಂಬಂಧ ರಾಜ್ಯ ಸರಕಾರ ಕರಡು ಅಧಿಸೂಚನೆ ಹೊರಡಿಸಿದೆ. ಅಧಿಸೂಚನೆ ಪ್ರಕಟವಾದ 15 ದಿನಗಳ ಒಳಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿದೆ.

ಸಿನಿಮಾ ಪ್ರದರ್ಶನದ ಟಿಕೆಟ್ ಬೆಲೆ 200 ರೂ. ಮೀರಬಾರದು ಎಂದು ಆದೇಶಿಸಿರುವ ರಾಜ್ಯ ಸರಕಾರ ಇದು ಎಲ್ಲ ಭಾಷೆಯ ಸಿನಿಮಾಗಳಿಗೂ ಅನ್ವಯ ಆಗಲಿದೆ. ಕನ್ನಡದ ಚಿತ್ರಗಳಿಗೆ ನಿರೀಕ್ಷಿತ ಪ್ರಮಾಣದ ಪ್ರೇಕ್ಷಕರು ಬಾರದೇ ಇರುವುದರಿಂದ ಅನೇಕ ಚಿತ್ರಮಂದಿರಗಳನ್ನು ಮುಚ್ಚಲಾಗಿದೆ. ಆದರೆ ರಾಜ್ಯದಲ್ಲಿ ಪರಭಾಷೆ ಸಿನಿಮಾಗಳು ಮಾತ್ರ ಬಹುಕೋಟಿ ರೂಪಾಯಿ ಮಾಡಿಕೊಳ್ಳುತ್ತವೆ. ಹೀಗಾಗಿ ಈಗ ಎಲ್ಲಾ ಭಾಷೆಗಳಿಗೂ ಸೇರಿದಂತೆ ಏಕರೂಪ ದರ ಫಿಕ್ಸ್ ಮಾಡಲಾಗಿದೆ ಎಂದಿದೆ.

















































error: Content is protected !!
Scroll to Top