ಛಾಯಾಗ್ರಾಹಕರಿಗಾಗಿ ಅಕಾಡೆಮಿ ಸ್ಥಾಪನೆಯಾಗಲಿ – ಯಶ್‌ಪಾಲ್‌ ಸುವರ್ಣ

ಉಡುಪಿ : ಛಾಯಾಗ್ರಾಹಕರ ಹಿತದೃಷ್ಟಿಯಿಂದ ಸರಕಾರ ಅಕಾಡೆಮಿ ಸ್ಥಾಪಿಸಬೇಕು. ಹಿರಿಯ ಛಾಯಾಗ್ರಾಹಕರಿಗೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು. ಈ ನಿಟ್ಟಿನಲ್ಲಿ ಅಧಿವೇಶನದ ವೇಳೆ ಸರಕಾರದ ಗಮನ ಸೆಳೆಯಲಿದ್ದೇನೆ ಎಂದು ಉಡುಪಿ ಶಾಸಕ ಯಶ್‌ಪಾಲ್‌ ಸುವರ್ಣ ಹೇಳಿದರು.

ಅವರು ಕಿದಿಯೂರು ಹೊಟೇಲ್‌ನ ಸಭಾಭವನದಲ್ಲಿ ನಡೆದ ಸೌತ್‌ ಕೆನರಾ ಫೋಟೋಗ್ರಾಫರ್ಸ್‌ ಅಸೋಸಿಯೇಷನ್‌ ದಕ್ಷಿಣ ಕನ್ನಡ ಉಡುಪಿ ಜಿಲ್ಲೆ ಇದರ ಉಡುಪಿ ವಲಯದ 30ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕರ್ಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಸುಗ್ಗಿ ಸುಧಾಕರ್‌ ಶೆಟ್ಟಿ ಮಾತನಾಡಿ, 30 ವರ್ಷಗಳ ಹಿಂದೆ ಸಂಘಟನೆಯನ್ನು ಕಟ್ಟುವಲ್ಲಿ ಸಂಘದ ಹಿರಿಯ ಸದಸ್ಯರ ಪಾತ್ರ ಮಹತ್ತರವಾದುದು. ಪ್ರಾರಂಭದ ಉದ್ದೇಶವನ್ನು ಸದಸ್ಯರು ಮುಂದುವರಿಸಿಕೊಂಡು ಬಂದ ಫಲವಾಗಿ ಇಂದು ಸಂಘಟನೆ ಛಾಯಾಗ್ರಾಹಕರ ಬದುಕಿನಲ್ಲಿ ಆಶಾಕಿರಣವಾಗಿ ಮೂಡಿ ಬಂದಿದೆ ಎಂದರು.

ಎಸ್‌ಕೆಪಿಎ ಜಿಲ್ಲಾಧ್ಯಕ್ಷ ಪದ್ಮಪ್ರಸಾದ್‌ ಜೈನ್‌ ಮಾತನಾಡಿ, ದ.ಕ. ಮತ್ತು ಉಡುಪಿ ಜಿಲ್ಲೆಯ ಛಾಯಾಚಿತ್ರಗ್ರಾಹಕರು ಸಂಘಟಿತರಾಗಿ ಎಸ್‌ಕೆಪಿಎ ಬಲಪಡಿಸಿದ್ದಾರೆ. ನಮ್ಮ ಸಂಘ ಮುಂದಿನ ದಿನಗಳಲ್ಲೂ ಉತ್ತಮ ರೀತಿಯಲ್ಲಿ ಮುಂದುವರಿಯಬೇಕೆಂದು ಆಶಯ ವ್ಯಕ್ತಪಡಿಸಿದರು.

ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾನಿಧಿ ಮತ್ತು ಸಹಾಯಧನ, ವಿವಿಧ ಕ್ರೀಡಾ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವೃತ್ತಿಯಲ್ಲಿ ಸಾಧನೆಗೈದ ಛಾಯಾಗ್ರಾಹಕರನ್ನು ಹಾಗೂ 30 ವರ್ಷಗಳಲ್ಲಿ ವಲಯದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅಧ್ಯಕ್ಷರನ್ನು ಸನ್ಮಾನಿಸಲಾಯಿತು.

ಉಡುಪಿ ವಲಯದ ಅಧ್ಯಕ್ಷ ಸುಧೀರ್‌ ಎಂ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ನಗರ ಸಭೆ ಅಧ್ಯಕ್ಷ ಪ್ರಭಾಕರ್‌ ಪೂಜಾರಿ, ಕಾಂಗ್ರೆಸ್‌ ಮುಖಂಡ ಪ್ರಸಾದ್‌ ರಾಜ್‌ ಕಾಂಚನ್‌, ಜಿಲ್ಲಾ ಸಂಚಾಲಕ ಕರುಣಾಕರ ಕಾನಂಗಿ, ಎಸ್‌ಕೆಪಿಎ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಕೆ. ವಾಸುದೇವ್‌ ರಾವ್‌, ಜಿಲ್ಲಾ ಉಪಾಧ್ಯಕ್ಷ ಪ್ರವೀಣ್‌ ಕೊರೆಯ, ಎಸ್‌ಕೆಪಿಎ ಪ್ರಧಾನ ಕಾರ್ಯದರ್ಶಿ ದಯಾನಂದ್‌ ಬಂಟ್ವಾಳ್‌, ಉಡುಪಿ ವಲಯ ಗೌರವಾಧ್ಯಕ್ಷ ನವೀನ್‌ ಚಂದ್ರ ಬಳ್ಳಾಲ್‌, ಉಪಾಧ್ಯಕ್ಷ ಸಂದೀಪ್‌ ಕಾಮತ್‌, ಪ್ರಧಾನ ಕೋಶಾಧಿಕಾರಿ ರಮೇಶ್‌ ಭಟ್‌ ಎಲ್ಲೂರು, ಜೊತೆ ಕಾರ್ಯದರ್ಶಿ ಭಾರತಿ ಭಾಸ್ಕರ್‌, ಕ್ರೀಡಾ ಕಾರ್ಯದರ್ಶಿ ಅಶೋಕ್‌ ಪುತ್ರನ್‌, ಸಂಘಟನಾ ಕಾರ್ಯದರ್ಶಿಗಳಾದ ಚಂದ್ರಶೇಖರ್‌ ಹಿರಿಯಡ್ಕ ಮತ್ತು ಎಂ.ಎಸ್.‌ ಮಂಜು, ಛಾಯಾ ಕಾರ್ಯದರ್ಶಿ ಅಶೋಕ್‌ ದೇವಾಡಿಗ ಹಾಗೂ ಸಾಂಸ್ಕೃತಿಕ ಕಾರ್ಯದರ್ಶಿ ಉದಯ್‌ ನಾಯ್ಕ್‌ ಉಪಸ್ಥಿತರಿದ್ದರು. ಕಾರ್ಯದರ್ಶಿ ದಿವಾಕರ್‌ ಹಿರಿಯಡ್ಕ ಸ್ವಾಗತಿಸಿದರು. ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

















































error: Content is protected !!
Scroll to Top