ಕಾರ್ಕಳ : ದನದ ರುಂಡ ಪತ್ತೆ

ಕಾರ್ಕಳ : ದುರ್ಗ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮಲೆಬೆಟ್ಟು ಬೆದ್ರಪಲ್ಕೆ ಸಂಪರ್ಕಿಸುವ ಉಳಿರು ಗಣಪತಿ ವರ್ಗ ಎಂಬ ಪ್ರದೇಶದಲ್ಲಿ ನದಿ ಬದಿಯಲ್ಲಿ ದನದ ರುಂಡ ಪತ್ತೆಯಾಗಿದೆ. ಜು. 13ರ ರಾತ್ರಿ ಸ್ಥಳೀಯರ ಗಮನಕ್ಕೆ ಬಂದಿದ್ದು ಇಂದು ಸ್ಥಳಕ್ಕೆ ಕಾರ್ಕಳ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ. ರುಂಡ ಕೊಳೆತ ಸ್ಥಿತಿಯಲ್ಲಿದ್ದು, ಮೇಲ್ನೋಟಕ್ಕೆ ಮುಂಡ್ಲಿ ಸ್ವರ್ಣಾ ನದಿ ಸಂಪರ್ಕಿಸುವ ಮಾಳದಿಂದ ಹರಿದು ಬರುವ ನದಿಯಲ್ಲಿ ತೇಲಿ ಬಂದಿದೆ ಎನ್ನಲಾಗುತ್ತಿದೆ. ಪೊಲೀಸ್‌ ತನಿಖೆಯಲ್ಲಿ ಇನ್ನಷ್ಟು ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.

ಹಿಂದೂ ಜಾಗರಣ ವೇದಿಕೆಯಿಂದ ತನಿಖೆಗೆ ಆಗ್ರಹ
ಘಟನಾ ಸ್ಥಳದಲ್ಲಿ ಹಿಂದೂ ಜಾಗರಣದ ವೇದಿಕೆಯ ಕಾರ್ಯಕರ್ತರು ಜಮಾಯಿಸಿದ್ದಾರೆ. ಈ ಅಮಾನವೀಯ ಕೃತ್ಯದ ಬಗ್ಗೆ ಖಂಡನೆ ವ್ಯಕ್ತಪಡಿಸಿದ್ದು, ಸೂಕ್ತ ತನಿಖೆಗೆ ಆಗ್ರಹಿಸಿದ್ದಾರೆ. ಅಲ್ಲದೆ ಹಿಂದುಗಳ ಧಾರ್ಮಿಕ ಭಾವನೆಯನ್ನು ಕೆರಳಿಸುವ ಈ ರೀತಿಯ ಕೃತ್ಯಗಳು ನಿರಂತರವಾಗಿ ನಡೆಯುತ್ತಿದ್ದು, ಸರಕಾರ ಅಕ್ರಮ ಗೋಸಾಗಟ ತಡೆಯುವಲ್ಲಿ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.









































































































error: Content is protected !!
Scroll to Top