ಉಡುಪಿ : ಶಾಂತಿಧಾಮ ಪೂರ್ವ ಗುರುಕುಲ ಕೋಟೇಶ್ವರ ಸಂಸ್ಥೆಯಲ್ಲಿ ವಿದ್ಯಾ ಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಆಯೋಜಿಸಿದ ಬುನಾದಿ ಶಿಕ್ಷಣ ಚಿಂತನ ಬೈಠಕ್ ʼಅಂಕುರ – 25ʼ ತರಬೇತಿ ಕಾರ್ಯಕ್ರಮವು ಜೂ. 5 ರಂದು ನಡೆಯಿತು. ಶಾಂತಿಧಾಮ ಪೂರ್ವ ಗುರುಕುಲ ಕೋಟೇಶ್ವರದ ಅಧ್ಯಕ್ಷ ಕೃಷ್ಣರಾಯ ಶಾನುಭಾಗ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮಾನವನ ಶರೀರವು ಪಂಚಭೂತಗಳಿಂದ ನಿರ್ಮಿತವಾಗಿದೆ. ಅದು ಪಂಚಕರ್ಮಗಳ ಮೂಲಕ ಕಾರ್ಯನಿರ್ವಹಿಸುತ್ತದೆ. ವಿದ್ಯಾರ್ಥಿಗಳ ಬೆಳವಣಿಗೆಗೆ ಬುನಾದಿ ಶಿಕ್ಷಣವನ್ನು ಸಮರ್ಪಕವಾಗಿ ಬಳಸುವ ನಿಟ್ಟಿನಲ್ಲಿ ಶಾಲೆಯಲ್ಲಿ ಇಂತಹ ತರಬೇತಿ ಅವಶ್ಯ ಎಂದರು.
ಕಾರ್ಯಕ್ರಮದಲ್ಲಿ ಶಾಂತಿಧಾಮ ಪೂರ್ವ ಗುರುಕುಲದ ಟ್ರಸ್ಟಿ ಪ್ರೇಮಾನಂದ ಶೆಟ್ಟಿ , ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಇದರ ಸದಸ್ಯ ರಾಮಪ್ರಸಾದ ಭಟ್, ವಿವಿಧ ವಿದ್ಯಾ ಸಂಸ್ಥೆಗಳ 41 ಮಾತಾಜಿ ಗುರೂಜಿಯವರು, ಜಿಲ್ಲಾ ಸಮಿತಿಯ ಸದಸ್ಯರು, ವಿಷಯ ಪ್ರಮುಖರು ಉಪಸ್ಥಿತರಿದ್ದರು. ಮುಖ್ಯಶಿಕ್ಷಕ ಅನಂತ ನಾಯ್ಕ್ ಸ್ವಾಗತಿಸಿ, ವಿದ್ಯಾಭಾರತಿ ಕರ್ನಾಟಕ ಜಿಲ್ಲಾ ಶಿಶು ಶಿಕ್ಷಣ ಪ್ರಮುಖ್ ಪ್ರತಿಮಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾತಾಜಿ ಅಮೃತ ಕಾರ್ಯಕ್ರಮ ನಿರೂಪಿಸಿ, ಜಿಲ್ಲಾ ಕಾರ್ಯದರ್ಶಿ ಮಹೇಶ್ ಹೈಕಾಡಿ ವಂದಿಸಿದರು.






























































