ದಕ್ಷಿಣ ಕನ್ನಡ ಜಿಲ್ಲೆಯಿಂದ 36 ಜನರ ಗಡಿಪಾರು ಪ್ರಕ್ರಿಯೆ ಶುರು

ಮಂಗಳೂರು : ಸರಣಿ ಕೊಲೆಗಳಿಂದ ಪ್ರಕ್ಷುಬ್ಧಗೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಕೋಮು ಪ್ರಚೋದನೆ ನೀಡುತ್ತಿದ್ದವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. 15 ಮುಸ್ಲಿಮರೂ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಒಟ್ಟು 36 ಜನರ ಗಡಿಪಾರಿಗೆ ಪ್ರಕ್ರಿಯೆ ಆರಂಭವಾಗಿದೆ.

ಗಡಿಪಾರು ಲಿಸ್ಟ್‌ನಲ್ಲಿರುವವರು
ಹಸೈನಾರ್- ಬಂಟ್ವಾಳ ನಗರ ಠಾಣೆ, ಪವನ್ ಕುಮಾರ್ -ಬಂಟ್ವಾಳ ಗ್ರಾಮಾಂತರ ಠಾಣೆ, ಚರಣ್ ರಾಜ್- ಬಂಟ್ವಾಳ ಗ್ರಾಮಾಂತರ, ಗಣೇಶ ಪೂಜಾರಿ- ವಿಟ್ಲ ಪೊಲೀಸ್ ಠಾಣೆ, ಅಬ್ದುಲ್ ಖಾದರ್- ವಿಟ್ಲ ಪೊಲೀಸ್ ಠಾಣೆ, ಚಂದ್ರಹಾಸ- ವಿಟ್ಲ ಪೊಲೀಸ್ ಠಾಣೆ, ಅಬ್ದುಲ್ ಲತೀಫ್- ಬಂಟ್ವಾಳ ಗ್ರಾಮಾಂತರ, ಮಹಮ್ಮದ್ ಅಶ್ರಫ್- ಬಂಟ್ವಾಳ ಗ್ರಾಮಾಂತರ, ಮೊಯ್ದಿನ್ ಅದ್ನಾನ್ – ಬಂಟ್ವಾಳ ಗ್ರಾಮಾಂತರ, ಭರತ್ ಕುಮ್ಡೇಲ್-ಬಂಟ್ವಾಳ ಗ್ರಾಮಾಂತರ, ಮಹಮ್ಮದ್ ಸಫ್ವಾನ್-ಬಂಟ್ವಾಳ ನಗರ, ಭುವಿತ್ ಶೆಟ್ಟಿ- ಬಂಟ್ವಾಳ ನಗರ, ರಾಜೇಶ್- ಬಂಟ್ವಾಳ ನಗರ, ಅಶ್ರಫ್ ಬಿ- ಪೂಂಜಾಲಕಟ್ಟೆ ಠಾಣೆ, ಮನೋಜ್ ಕುಮಾರ್- ಬೆಳ್ತಂಗಡಿ ಠಾಣೆ, ಮಹೇಶ ಶೆಟ್ಟಿ ತಿಮರೋಡಿ- ಬೆಳ್ತಂಗಡಿ ಠಾಣೆ, ಹಕೀಂ ಕೂರ್ನಡ್ಕ- ಪುತ್ತೂರು ನಗರ, ಅಜಿತ್ ರೈ- ಪುತ್ತೂರು ನಗರ ಇವರನ್ನು ಗಡಿಪಾರಿಗೆ ಆದೇಶಿಸಲಾಗಿದೆ.

ಜೊತೆಗೆ ಅರುಣ್ ಕುಮಾರ್ ಪುತ್ತಿಲ- ಪುತ್ತೂರು ನಗರ, ಮನೀಶ್ ಎಸ್- ಪುತ್ತೂರು ನಗರ, ಅಬ್ದುಲ್ ರಹಿಮಾನ್- ಪುತ್ತೂರು ನಗರ, ಕೆ. ಅಝೀಜ್- ಪುತ್ತೂರು ನಗರ, ಕಿಶೋರ್- ಪುತ್ತೂರು ಗ್ರಾಮಾಂತರ, ರಾಕೇಶ್ ಕೆ- ಪುತ್ತೂರು ಗ್ರಾಮಾಂತರ, ನಿಶಾಂತ್ ಕುಮಾರ್- ಪುತ್ತೂರು ಗ್ರಾಮಾಂತರ, ಮಹಮ್ಮದ್ ನವಾಝ್- ಕಡಬ ಠಾಣೆ, ಸಂತೋಷ್ ಕುಮಾರ್ ರೈ- ಉಪ್ಪಿನಂಗಡಿ ಠಾಣೆ, ಜಯರಾಮ- ಉಪ್ಪಿನಂಗಡಿ ಠಾಣೆ, ಸಂಶುದ್ದೀನ್- ಉಪ್ಪಿನಂಗಡಿ ಠಾಣೆ, ಸಂದೀಪ್- ಉಪ್ಪಿನಂಗಡಿ ಠಾಣೆ, ಮಹಮ್ಮದ್ ಶಾಕಿರ್- ಉಪ್ಪಿನಂಗಡಿ ಠಾಣೆ, ಅಬ್ದುಲ್ ಅಝೀಝ್ -ಉಪ್ಪಿನಂಗಡಿ ಠಾಣೆ, ಲತೇಶ್ ಗುಂಡ್ಯ- ಸುಳ್ಯ ಠಾಣೆ, ಮನೋಹರ- ಸುಳ್ಯ ಠಾಣೆ, ಪ್ರಸಾದ್- ಬೆಳ್ಳಾರೆ ಠಾಣೆ, ಶಮೀರ್ ಕೆ- ಬೆಳ್ಳಾರೆ ಠಾಣೆ, ಮುಂತಾದವರ ಗಡಿಪಾರು ಮಾಡುವ ಸಲುವಾಗಿ ಕಾನೂನು ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ಸರಕಾರದ ನಿರ್ಧಾರಕ್ಕೆ ಅರುಣ್ ಪುತ್ತಿಲ ಆಕ್ರೋಶ ಹೊರಹಾಕಿದ್ದು, ನಾನು ಯಾವುದೇ ಕಾರಣಕ್ಕೂ ಗಡೀಪಾರು ಆದೇಶ ಸ್ವೀಕರಿಸಲ್ಲ ಎಂದಿದ್ದಾರೆ.

ಪ್ರಚೋದನಕಾರಿ ಭಾಷಣ ಆರೋಪ : ಕಲ್ಲಡ್ಕ ಪ್ರಭಾಕರ್ ಭಟ್​ಗೆ ರಿಲೀಫ್
ಮೇ 12ರಂದು ಆರ್​ಎಸ್​​ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಬಂಟ್ವಾಳದ ಗ್ರಾಮಾಂತರ ಠಾಣೆಯಲ್ಲಿ ಎಫ್​ಐಆರ್ ದಾಖಲಿಸಲಾಗಿತ್ತು. ಪ್ರಕರಣ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದ ಪ್ರಭಾಕರ ಭಟ್​ಗೆ ರಿಲೀಫ್ ಸಿಕ್ಕಿದೆ. ಬಂಧನ ಸಹಿತ ಯಾವುದೇ ಒತ್ತಡದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಆದೇಶ ನೀಡಿದೆ.









































































































error: Content is protected !!
Scroll to Top