ಕಲ್ಲಗುಪ್ಪೆ ಸ. ಹಿ. ಪ್ರಾ. ಶಾಲೆ ಪ್ರಾರಂಭೋತ್ಸವ

ಕಾರ್ಕಳ : ಜೋಡುಕಟ್ಟೆ ಕಲ್ಲಗುಪ್ಪೆ ಸ. ಹಿ. ಪ್ರಾ. ಶಾಲೆಯಲ್ಲಿ ಜೂ. 2ರಂದು ಶಾಲಾ ಪ್ರಾರಂಭೋತ್ಸವ ನಡೆಯಿತು.
ಕಾರ್ಯಕ್ರಮದಲ್ಲಿ ಶಾಲಾ ಎಸ್‌.ಡಿ.ಎಂ.ಸಿ ಅಧ್ಯಕ್ಷರಾದ ವಿಜಯ ಶೆಟ್ಟಿ, ಶಾಲಾ ಪೋಷಕ ದಾನಿ ಜನಾರ್ಧನ್ ಇಡ್ಯಾ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಜಿತ್ ಕುಮಾರ್, ಕಾರ್ಯದರ್ಶಿ ಸುಮಿತ್ರ ಇಡ್ಯಾ, ಕ್ಷೇತ್ರ ಸಂಪನ್ಮೂಲ ಅಧಿಕಾರಿ ಉಮೇಶ್ ಕೆ. ಎಸ್., ದಾನಿಗಳಾದ ಸುಬ್ಬಲಕ್ಷ್ಮಿ, ಮೀನಾಕ್ಷಿ ಹಾಗೂ ಮಲ್ಲಿಕಾ, ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ದೀಪ್ತಿ ದಿನೇಶ್, ಹಳೆ ವಿದ್ಯಾರ್ಥಿಗಳು, ಪೋಷಕರು, ಎಸ್.ಡಿ.ಎಂ ಸಿ ಸದಸ್ಯರು ಉಪಸ್ಥಿತರಿದ್ದರು. ಮಕ್ಕಳಿಗೆ ಬಲೂನ್ ನೀಡಿ ಪುಷ್ಪಾರ್ಚನೆ ಮಾಡಿ ಸ್ವಾಗತಿಸಲಾಯಿತು. ಶಾಲಾ ಮುಖ್ಯ ಶಿಕ್ಷಕ ಮನೋಹರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹ ಶಿಕ್ಷಕಿ ಸುನಂದ ಕಾರ್ಯಕ್ರಮ ನಿರೂಪಿಸಿದರು. ವನಿತಾ ಹೆಗ್ಡೆ ವಂದಿಸಿದರು.









































































































error: Content is protected !!
Scroll to Top