ಕಾರ್ಕಳ : ಶನಿವಾರ ಬೆಳ್ಳಂಬೆಳಗ್ಗೆ ಕಾರ್ಕಳ ಮೆಸ್ಕಾಂ ಅಧಿಕಾರಿ ಮನೆಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮೆಸ್ಕಾಂ ಅಕೌಂಟೆಡ್ ಆಫೀಸರ್ (AO) ಗಿರೀಶ್ ರಾವ್ ಅವರ ಮನೆ, ಮೆಸ್ಕಾಂ ಕಚೇರಿ ಹಾಗೂ ಕಾರ್ಕಳ ಬೈಪಾಸ್ ನಲ್ಲಿರುವ ಅವರ ಮಾಲಕತ್ವದ ಕಾರ್ಕಳ ಇನ್ ಲಾರ್ಡ್ಜ್ ಮತ್ತು ಬೈಪಾಸ್ ನವೋದಯ ಸರ್ಕಲ್ ಬಳಿಯಿರುವ ಸಂಬಂಧಿಕರ ಮನೆ ಮೇಲೆ ದಾಳಿ ನಡೆಸಿದ್ದಾರೆ. ಲೋಕಾಯುಕ್ತ ಎಸ್. ಪಿ. ಕುಮಾರಚಂದ್ರ ನೇತೃತ್ವದಲ್ಲಿ 5 ತಂಡ ಮುಂಜಾನೆ 5.30ಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಬೆಳ್ಳಂಬೆಳಗ್ಗೆ ಕಾರ್ಕಳ ಮೆಸ್ಕಾಂ ಅಧಿಕಾರಿ ಮನೆಗೆ ಲೋಕಾಯುಕ್ತ ದಾಳಿ






























































