ಮಂಗಳೂರು ಕಮಿಷನರ್ ಆಗಿ ಸುಧೀರ್ ಕುಮಾರ್ ರೆಡ್ಡಿ
ಬೆಂಗಳೂರು : ಉಡುಪಿ ಎಸ್‌ಪಿ ಡಾ. ಅರುಣ್ ಕೆ. ಅವರು ಮಂಗಳೂರು ಎಸ್‌ಪಿಯಾಗಿ ವರ್ಗಾವಣೆ ಹೊಂದಿದ್ದಾರೆ. ರಾಜ್ಯ ಗುಪ್ತಚರ ಇಲಾಖೆಯಲ್ಲಿ ಎಸ್‌ಪಿಯಾಗಿರುವ ಹರಿರಾಮ್ ಶಂಕರ್ ಉಡುಪಿ ಜಿಲ್ಲೆಗೆ ನೂತನ ಎಸ್‌ಪಿಯಾಗಿ ಅಧಿಕಾರ ವಹಿಸಲಿದ್ದಾರೆ. ಮಂಗಳೂರು ಪೊಲೀಸ್ ಕಮೀಷನರ್ ಆಗಿ ರಾಜ್ಯ ಗುಪ್ತಚರ ಇಲಾಖೆಯ ಆಯುಕ್ತರಾಗಿದ್ದ ಈ ಹಿಂದೆ ಮಂಗಳೂರು ಎಸ್‌ಪಿಯಾಗಿದ್ದ ಸುಧೀರ್ ಕುಮಾರ್ ರೆಡ್ಡಿ ಅವರನ್ನು ನೇಮಕಗೊಳಿಸಿ ಮೇ 29ರಂದು ಸರಕಾರ ಆದೇಶ ಹೊರಡಿಸಿದೆ.
ಮೂಲತಃ ತಮಿಳುನಾಡಿನ ಡಾ. ಅರುಣ್ ಅವರು ಎಂಬಿಬಿಎಸ್ ಪದವೀಧರರು. 2014ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಡಾ. ಅರುಣ್ 2016-17ರ ಅವಧಿಯಲ್ಲಿ ಬಂಟ್ವಾಳ ಎಎಸ್ಪಿಯಾಗಿ ಕಾರ್ಯನಿರ್ವಹಿಸಿದ್ದರು. ಚಿತ್ರದುರ್ಗ, ದಾವಣಗೆರೆ, ವಿಜಯಪುರದಲ್ಲಿ ಎಸ್‌ಪಿಯಾಗಿ ಕಾರ್ಯನಿರ್ವಹಿಸಿದ್ದರು.

ಕೇರಳದ ಹರಿರಾಂ ಶಂಕರ್ ಅವರು ಕುಂದಾಪುರದಲ್ಲಿ ಎಎಸ್‌ಪಿಯಾಗಿ, ಮಂಗಳೂರಿನಲ್ಲಿ ಎಸಿಪಿಯಾಗಿ ಬಳಿಕ ಹಾಸನ ಎಸ್‌ಪಿಯಾಗಿ ಕಾರ್ಯನಿರ್ವಹಿಸಿದ್ದರು.






























































