ಖಾಸಗಿ ಎಂಜಿನಿಯರಿಂಗ್ ಕಾಲೇಜು ಶುಲ್ಕ ಶೇ 7.5 ಹೆಚ್ಚಳ ಸಾಧ್ಯತೆ

ಬೆಂಗಳೂರು : ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳು ಶೇ. 20ರಷ್ಟು ಶುಲ್ಕ ಹೆಚ್ಚಿಸುವಂತೆ ಸರಕಾರವನ್ನು ಆಗ್ರಹಿಸಿದ್ದವು. ಅಂತಿಮವಾಗಿ ಕರ್ನಾಟಕ ಅನುದಾನರಹಿತ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಸಂಘ ಮತ್ತು ಖಾಸಗಿ ವೃತ್ತಿಪರ ಕಾಲೇಜುಗಳ ಆಡಳಿತ ಮಂಡಳಿಯ ಪ್ರತಿನಿಧಿಗಳ ಜತೆ ಸಭೆ ನಡೆಸಿರುವ ಉನ್ನತ ಶಿಕ್ಷಣ ಇಲಾಖೆ ಶೇ 7.5ರಷ್ಟು ಶುಲ್ಕ ಏರಿಕೆ ಮಾಡಲು ಸರಕಾರ ಒಪ್ಪಿಗೆ ನೀಡಿದೆ ಎಂದು ಮೂಲಗಳು ತಿಳಿಸಿವೆ. ಪರಿಣಾಮವಾಗಿ 2025-26ನೇ ಶೈಕ್ಷಣಿಕ ವರ್ಷದಲ್ಲಿ ಖಾಸಗಿ ಕಾಲೇಜುಗಳ ಎಂಜಿನಿಯರಿಂಗ್ ಕೋರ್ಸ್ ದುಬಾರಿಯಾಗಲಿದೆ.

ಅಧ್ಯಾಪಕರ ವೇತನ ಹೆಚ್ಚಳ, ಕಾಲೇಜುಗಳ ಮೂಲಸೌಕರ್ಯ ಸುಧಾರಣೆ, ನಿರ್ವಹಣೆ ಮತ್ತು ಗುಣಮಟ್ಟವನ್ನು ಪರಿಗಣಿಸಿ 2025-26ನೇ ಸಾಲಿನಲ್ಲೂ ಶೇ 20ರಷ್ಟು ಹೆಚ್ಚಳಕ್ಕೆ ಕರ್ನಾಟಕ ಅನುದಾನರಹಿತ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಸಂಘ ಮನವಿ ಸಲ್ಲಿಸಿತ್ತು. ಆದರೆ ಶೇಕಡಾ 7.5 ರಷ್ಟು ಏರಿಕೆಗೆ ಮಾತ್ರ ಇಲಾಖೆ ಅಸ್ತು ಎಂದಿದೆ. ಇದು ವಾರ್ಷಿಕವಾಗಿ ನಡೆಯುವ ಸಹಜ ಪ್ರಕ್ರಿಯೆ ಎಂದು ಉನ್ನತ ಶಿಕ್ಷಣ ಇಲಾಖೆ ಸ್ಪಷ್ಟನೆ ನೀಡಿದೆ.

ಪ್ರಸ್ತುತ ಸರಕಾರಿ ಕೋಟಾದ ಸೀಟುಗಳಿಗೆ ಖಾಸಗಿ ಕಾಲೇಜುಗಳ ಶುಲ್ಕ 1.06 ಲಕ್ಷ ರೂ., ಕಾಮೆಡ್-ಕೆ (ಟೈಪ್-1) ಶುಲ್ಕ 1.86 ಲಕ್ಷ ರೂ. ಹಾಗೂ (ಟೈಪ್-2) 2.61 ಲಕ್ಷ ರೂ. ಇದೆ. ಇವುಗಳು ಶೇ 7.5 ಶುಲ್ಕ ಹೆಚ್ಚಳ ಪ್ರಕಾರ ಕ್ರಮವಾಗಿ ಏರಿಕೆ ಆಗಲಿವೆ. ಈಗಾಗಲೇ ಹಲವು ರೀತಿಯ ಬೆಲೆ ಏರಿಕೆಯಿಂದ ನಲುಗುತ್ತಿರುವ ಪೋಷಕರಿಗೆ ಶೇ 7.5 ರ ಶುಲ್ಕ ಹೆಚ್ಚಳ ಮತ್ತಷ್ಟು ಹೊರೆ ಆಗಲಿದೆ ಎಂದು ವಿದ್ಯಾರ್ಥಿ ಸಂಘಟನೆಗಳು ಅಸಮಾಧಾನ ಹೊರಹಾಕಿವೆ.





























































































































error: Content is protected !!
Scroll to Top