ಸುಹಾಸ್ ಶೆಟ್ಟಿ ಕುಟುಂಬಕ್ಕೆ ಕಾರ್ಕಳದ ವಿಜಯ್‌ ಶೆಟ್ಟಿಯವರಿಂದ 1 ಲಕ್ಷ ರೂ. ಧನಸಹಾಯ

ಕಾರ್ಕಳ : ಮಂಗಳೂರಿನ ಬಜ್ಪೆ ಕಿನ್ನಿಪದವಿನಲ್ಲಿ ಮೇ 1ರಂದು ಹತ್ಯೆಗೀಡಾದ ಹಿಂದೂ ಕಾರ್ಯಕರ್ತ ಸುಹಾಸ್‌ ಶೆಟ್ಟಿ ಅವರ ಮನೆಗೆ ಮೇ 6ರಂದು ಕಾರ್ಕಳ ಬಂಟರ ಸಂಘದ ಪ್ರಮುಖರು ಭೇಟಿ ನೀಡಿ ಸಂತಾಪ ಸೂಚಿಸಿದರು. ಈ ಸಂದರ್ಭ ಕಾರ್ಕಳ-ಹೆಬ್ರಿ ಬಂಟರ ಯಾನೆ ನಾಡವರ ಮಾತೃ ಸಂಘದ ಸಂಚಾಲಕ ವಿಜಯ್ ಶೆಟ್ಟಿಯವರು ವೈಯಕ್ತಿಕವಾಗಿ 1 ಲಕ್ಷ ರೂ. ಧನಸಹಾಯವನ್ನು ಸುಹಾಸ್‌ ಶೆಟ್ಟಿಯ ತಂದೆ ತಾಯಿಗೆ ಹಸ್ತಾಂತರಿಸಿದರು. ಸೂರ್ಯಕಾಂತ್ ಶೆಟ್ಟಿ, ಹಿತೇಶ್ ಶೆಟ್ಟಿ, ವಿಖ್ಯಾತ್ ಶೆಟ್ಟಿ, ಸುಹಾಸ್ ಶೆಟ್ಟಿ, ದೇವೇಂದ್ರ ಶೆಟ್ಟಿ, ರಾಕೇಶ್ ಶೆಟ್ಟಿ ಹಾಗೂ ಪ್ರಕಾಶ್ ಶೆಟ್ಟಿ ಸೇರಿದಂತೆ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.









































































































error: Content is protected !!
Scroll to Top