ಡಾ. ಜಿ. ಪರಮೇಶ್ವರ್ ಅಸಮರ್ಥ ಗೃಹಮಂತ್ರಿ : ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಬೆಂಗಳೂರು : ಗೃಹ ಸಚಿವ ಜಿ. ಪರಮೇಶ್ವರ ಅವರನ್ನು ಅಸಮರ್ಥ ಗೃಹಮಂತ್ರಿ ಎಂದು ಕರೆದಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಒತ್ತಾಯಿಸಿದ್ದಾರೆ. ಬೆಂಗಳೂರಿನಲ್ಲಿ ಸೋಮವಾರ ನಡೆದ ಪಾಕಿಸ್ತಾನಿ ಪ್ರಜೆಗಳನ್ನು ರಾಜ್ಯದಿಂದ ಹೊರಹಾಕುವ ಕುರಿತ ಸಹಿ ಅಭಿಯಾನದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿದ ಅವರು ಸಿಎಂ, ಸಚಿವರು ಮತ್ತು ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಸಚಿವ ಜಮೀರ್‌ ಅಹ್ಮದ್‌ ಖಾನ್‌ ಅವರು ಬಾಂಬ್‌ ಕಟ್ಟಿಕೊಂಡು ಪಾಕಿಸ್ಥಾನಕ್ಕೆ ಹೋಗುವುದು ಬೇಡ. ಸಂಸಾರ ಸಮೇತ 2 ವರ್ಷ ಪಾಕಿಸ್ಥಾನದಲ್ಲಿ ಇರಲಿ ಟಾಂಗ್ ನೀಡಿದರು.

ಹಿಂದೆ ಬಿಹಾರದಲ್ಲಿ ಪ್ರತಿನಿತ್ಯ ಅಪರಾಧ ನಡೆಯುತ್ತಿದೆ ಎಂದು ದಕ್ಷಿಣದಲ್ಲಿ ನಾವು ಕುಳಿತು ಮಾತನಾಡುತ್ತಿದ್ದೆವು. ಈಗ ಬಿಹಾರದಲ್ಲಿ ಶಾಂತಿ ನೆಲೆಸಿದೆ. ಕರ್ನಾಟಕದಲ್ಲಿ ಪ್ರತಿನಿತ್ಯ ಒಂದು- ಎರಡು, ಮೂರು ನಾಲ್ಕು ಎಂಬ ರೀತಿಯಲ್ಲಿ ಕೊಲೆ ನಡೆಯುತ್ತಿದೆ. ಕರ್ನಾಟಕದಲ್ಲಿ ರಾಜ್ಯ ಸರಕಾರ ಬದುಕಿದೆಯೇ ಅಥವಾ ಸತ್ತಿದೆಯೇ ಎಂಬ ಸಂಶಯ ಕೇವಲ ನಮ್ಮ ರಾಜ್ಯದ ಜನರಿಗೆ ಅಲ್ಲ, ನಾವು ಯಾವ ರಾಜ್ಯಕ್ಕೆ ಹೋದರೂ ಕೂಡ ನಿಮ್ಮ ರಾಜ್ಯಕ್ಕೆ ಏನಾಗಿದೆ? ಎಂಬ ಪ್ರಶ್ನೆ ಕೇಳುತ್ತಿದ್ದಾರೆ. ಸಿದ್ದರಾಮಯ್ಯನವರ ಸರಕಾರ ಯಾವಾಗ ಆಡಳಿತಕ್ಕೆ ಬರುತ್ತದೋ, ಕರ್ನಾಟಕ ರಾಜ್ಯದಲ್ಲಿ ಅಪರಾಧಿಗಳ ಕೈ ಮೇಲಾಗುತ್ತದೆ ಎಂದು ಟೀಕಿಸಿದರು.

2013ರಲ್ಲಿ ಸಿದ್ದರಾಮಯ್ಯನವರ ಸರಕಾರ ಆಡಳಿತ ಮಾಡಿತ್ತು. ಅವತ್ತು ಅಪರಾಧಿಗಳ ಕೈ ಮೇಲಾಗಿತ್ತು. ಅವತ್ತು ಇದ್ದ ಪಿಎಫ್‍ಐ, ಕೆಎಫ್‍ಡಿ- ಹೀಗೆ ಬೇರೆಬೇರೆ ಹೆಸರಿನಲ್ಲಿ ಕಾರ್ಯಾಚರಣೆ ಮಾಡುತ್ತಿದ್ದ ಭಯೋತ್ಪಾದಕರನ್ನು, ಸಮಾಜಘಾತುಕರನ್ನು, ರುದ್ರೇಶ್ ಅವರ ಕೊಲೆ ಸೇರಿ ಬೇರೆ ಬೇರೆ ಕೇಸಿನಲ್ಲಿ ಬಂಧನಕ್ಕೆ ಒಳಗಾದವರ ಮೊಕದ್ದಮೆಗಳನ್ನು ಕ್ಯಾಬಿನೆಟ್ ಸಭೆಯಲ್ಲಿ ಹಿಂದಕ್ಕೆ ಪಡೆದಿದ್ದರು ಎಂದು ಆರೋಪಿಸಿದರು.

ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆ ಸುಡುವ ಘಟನೆ ನಡೆಯಿತು. ಮೈಸೂರಿನಲ್ಲಿ ಪೊಲೀಸ್ ಠಾಣೆಗೆ ನುಗ್ಗುವ ಕೆಲಸ ಮಾಡಿದರು. ಪೊಲೀಸರಿಗೆ ಹೊಡೆದರು. ಅಂತಹ 43 ಕೇಸುಗಳನ್ನು ಮತ್ತೆ ಹಿಂಪಡೆಯುವ ಒಂದು ಪ್ರಸ್ತಾಪವನ್ನು ಸಂಪುಟ ಸಭೆಗೆ ಸಿದ್ದರಾಮಯ್ಯನವರು ತಂದರು. ರಾಜ್ಯದಲ್ಲಿರುವ ಸಮಾಜಘಾತುಕರನ್ನು, ಭಯೋತ್ಪಾದಕರನ್ನು ರಸ್ತೆಯಲ್ಲಿ ಬಿಡುವ ಕೆಲಸವನ್ನು ಸಿದ್ದರಾಮಯ್ಯನವರು ಮಾಡಿದ್ದಾರೆ. ಯಾರು ಜೈಲಿನಲ್ಲಿ ಇರಬೇಕೋ ಅವರನ್ನು ಬೀದಿಗೆ ಬಿಟ್ಟರು. ಅವರನ್ನು ರಾಜಾರೋಷವಾಗಿ ತಿರುಗಲು ಬಿಟ್ಟಿದ್ದಾರೆ. ಅಲ್ಲದೆ ಅವರು ಅಪರಾಧ ಮಾಡಲು ಕುಮ್ಮಕ್ಕು ನೀಡಿದ್ದಾರೆ ಎಂದು ಟೀಕಿಸಿದರು.



































































































error: Content is protected !!
Scroll to Top