ಅಂತರಾಷ್ಟ್ರೀಯ ಕಾಮಿ೯ಕ ದಿನ : ಶ್ರಮಜೀವಿಗಳಿಗೆ ನಮೊ ನಮ:

ಶ್ರಮಜೀವಿಗಳ ಕೆಲಸವನ್ನು ಗೌರವಿಸುವ ಹಾಗೂ ಅವರ ಕಷ್ಟಗಳನ್ನು ಸ್ಮರಿಸುವ ಸಲುವಾಗಿ ಮೇ 1ರಂದು ಜಾಗತಿಕವಾಗಿ ‘ಅಂತಾರಾಷ್ಟ್ರೀಯ ಕಾರ್ಮಿಕರ ದಿನ’ವನ್ನಾಗಿ ಆಚರಿಸಲಾಗುತ್ತದೆ. ಇದನ್ನು ಮೇ ಡೇ, ಲೇಬರ್‌ ಡೇ ಹಾಗೂ ವರ್ಕರ್ಸ್‌ ಡೇ ಎಂತಲೂ ಕರೆಯಲಾಗುತ್ತದೆ. ಕಾರ್ಮಿಕ ವರ್ಗದ ಶ್ರಮ ಮತ್ತು ಸಮರ್ಪಣೆಯನ್ನು ಗುರುತಿಸುವುದು, ಕಾರ್ಮಿಕರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಶೋಷಣೆಯಿಂದ ರಕ್ಷಿಸುವುದು ಕಾರ್ಮಿಕ ದಿನದ ಉದ್ದೇಶ.

ಇತಿಹಾಸ ಹೀಗಿದೆ :-

1886ರಲ್ಲಿ ಅಮೆರಿಕದಲ್ಲಿ ಮೊದಲ ಬಾರಿಗೆ ಕಾರ್ಮಿಕರ ದಿನ ಆಚರಿಸಲಾಯಿತು. ದಿನಕ್ಕೆ ಕಾರ್ಮಿಕರಿಗೆ 8 ಗಂಟೆ ಕೆಲಸದ ಅವಧಿಯನ್ನು ನಿಗದಿ ಮಾಡಬೇಕು ಎಂಬ ಆಗ್ರಹದೊಂದಿಗೆ ಶುರುವಾದ ಚಳವಳಿಗೆ ಯಶಸ್ಸು ಸಿಕ್ಕಿತ್ತು. ಇದೇ ಹೋರಾಟದ ಕಿಚ್ಚಿನಲ್ಲಿ ಉದಯಿಸಿದ್ದೇ ಕಾರ್ಮಿಕರ ದಿನಾಚರಣೆ. ಭಾರತದಲ್ಲಿ ಈ ಆಚರಣೆ ಆರಂಭವಾಗಿದ್ದು 1923ರಲ್ಲಿ. ವಿಶ್ವದ ನಾನಾ ಭಾಗಗಳಲ್ಲಿ ಕಾರ್ಮಿಕರ ದಿನಾಚರಣೆಯನ್ನು ಆಚರಿಸುವ ಮೂಲಕ ಶ್ರಮಜೀವಿಗಳಿಗೆ ಕೃತಜ್ಞತೆ ಸಲ್ಲಿಸಲಾಗುತ್ತದೆ.

1886 ಮೇ 1 ಕಾರ್ಮಿಕ ಹೋರಾಟದ ಇತಿಹಾಸದಲ್ಲಿ ಒಂದು ಮಹತ್ವದ ಘಟ್ಟ. ಲಕ್ಷಾಂತರ ಮಂದಿ ಕಾರ್ಮಿಕರು 8 ಗಂಟೆಗಳ ಕೆಲಸದ ನಿಗದಿಗೆ ಪ್ರತಿಭಟನೆ ಪ್ರಾರಂಭಿಸಿದ್ದರು. ಈ ಹೋರಾಟದಲ್ಲಿ ಎಷ್ಟೋ ಕಾರ್ಮಿಕರು ಪ್ರಾಣ ತ್ಯಾಗ ಮಾಡಬೇಕಾಯಿತು. ಹೀಗಾಗಿ 1916 ರವರೆಗೂ ಅಮೆರಿಕ 8 ಗಂಟೆಗಳ ಕೆಲಸ ಸಮಯವನ್ನು ನಿಗದಿಗೊಳಿಸಿತು. ಕಾರ್ಮಿಕ ಹೋರಾಟಕ್ಕೆ ಸಿಕ್ಕ ಯಶಸ್ಸಿನ ನೆನಪಿಗಾಗಿ ಹಾಗೂ ಮೃತ ಕಾರ್ಮಿಕರ ಗೌರವಾರ್ಥವಾಗಿ ಮೇ 1 ರಂದು ಕಾರ್ಮಿಕರ ದಿನವಾಗಿ ಆಚರಿಸಲಾಗುತ್ತಿದೆ.
ಕಾರ್ಮಿಕರು ಕೇವಲ ಹೊಟ್ಟೆಪಾಡಿಗಾಗಿ ದುಡಿಯುವ ಮಂದಿಯಲ್ಲ ಅವರು ದೇಶದ ಅಭಿವೃದ್ಧಿಯಲ್ಲಿ ತನ್ನದೇ ಆದ ರೀತಿಯಲ್ಲಿ ಸೇವೆ ಸಲ್ಲಿಸುತ್ತಾರೆ;

ವ್ಯಕ್ತಿತ್ವ ವಿಕಸನ ಮಾಡಬೇಕಾಗಿದೆ :- ಹೆಚ್ಚಿನ ಕಾರ್ಮಿಕರು ತಮ್ಮ ಬದುಕನ್ನು ಕಟ್ಟಿಕೊಳ್ಳುವ ಉದ್ದೇಶದಿಂದ ಅನೇಕ ರೀತಿಯ ಬದುಕಿಗೆ ಅಪಾಯ ಉಂಟು ಮಾಡುವ ಕೆಲಸಗಳನ್ನು ಕೂಡ ಮಾಡುತ್ತಿದ್ದಾರೆ ಆದರೆ ಶಿಕ್ಷಣ ಕೊರತೆಯಿಂದಾಗಿ ಅವರಲ್ಲಿ ಹೊಸ ರೀತಿಯ ಕೌಶಲ್ಯಗಳು ಬೆಳೆದಿಲ್ಲ ಈ ನಿಟ್ಟಿನಲ್ಲಿ ಕಾರ್ಮಿಕರು ತನ್ನ ವ್ಯಕ್ತಿತ್ವ ವಿಕಸನದತ್ತ ಹೆಚ್ಚಿನ ಗಮನವನ್ನು ನೀಡಬೇಕಾಗಿದೆ ಪ್ರಾಮುಖ್ಯವಾಗಿ ಇತ್ತೀಚಿನ ದಿನಗಳಲ್ಲಿ ಅಗತ್ಯವಾಗಿರುವ ಅನೇಕ ರೀತಿಯ ಕೌಶಲ್ಯಗಳನ್ನು ಕಲಿತುಕೊಂಡು ಆ ಮೂಲಕ ತನ್ನ ಕೆಲಸವನ್ನು ಮಾಡಬೇಕಾಗಿದೆ.

ಬದುಕಿಗಾಗಿ ಉಳಿತಾಯ ಮಾಡಿ ಹೆಚ್ಚಿನ ಕಾರ್ಮಿಕರು ತನ್ನ ಆದಾಯವನ್ನು ಕುಟುಂಬದ ಖರ್ಚಿಗಾಗಿ ಮತ್ತು ಹವ್ಯಾಸಗಳಿಗಾಗಿ ಖರ್ಚು ಮಾಡುವುದನ್ನು ನಾವು ನೋಡಿದ್ದೇವೆ ಈ ನಿಟ್ಟಿನಲ್ಲಿ ಕಾರ್ಮಿಕರು ತಮ್ಮ ಆದಾಯದ ಒಂದು ಅಂಶವನ್ನು ಉಳಿತಾಯ ಮಾಡಬೇಕಾಗಿದೆ ಮುಂದೆ ಅವರ ಸಂಧ್ಯಾ ಕಾಲದಲ್ಲಿ ಈ ಹಣವು ಅವರಿಗೆ ದಾರಿದೀಪವಾಗಬಹುದು.
ಅನೇಕ ರೀತಿಯ ಉಳಿತಾಯ ಯೋಜನೆಗಳು ಬ್ಯಾಂಕ್ ಮತ್ತು ಅಂಚೆ ಕಚೇರಿಯಲ್ಲಿ ಲಭ್ಯವಿದೆ ಇದರ ಸದುಪಯೋಗವನ್ನು ಪಡೆಯಬಹುದಾಗಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಮಿಕರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದರೂ ‘ಕೂಡ ಅದರ ಸದುಪಯೋಗ ಕಾರ್ಮಿಕರಿಗೆ ವಿವಿಧ ಕಾರಣಗಳಿಂದ ಆಗದಿರುವುದು ನಾವು ಗಮನಿಸಿದ್ದೇವೆ. ಈ ನಿಟ್ಟಿನಲ್ಲಿ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಆ ಮೂಲಕವಾಗಿ ತನ್ನ ಬದುಕನ್ನು ಮತ್ತಷ್ಟು ಅಭಿವೃದ್ಧಿಗಳಿಸುವ ನಿಟ್ಟಿನಲ್ಲಿ ಕಾರ್ಮಿಕರು ಗಮನ ಹರಿಸಬೇಕಾಗಿದೆ.

ಕೊನೆಯದಾಗಿ ಕೇವಲ ಮೇ ಒಂದರಂದು ಕಾಮಿ೯ಕರಿಗೆ ನೆನಪು ಮಾಡಿದರೆ ಸಾಲದು, ಬದಲಾಗಿ ಪ್ರತಿದಿನವೂ ಕಾರ್ಮಿಕರ ಆರೋಗ್ಯದ ದೃಷ್ಟಿಯಲ್ಲಿ ನಾವೆಲ್ಲರೂ ಚಿಂತನೆ ಮಾಡಬೇಕಾಗಿದೆ ಎಲ್ಲಾ ಕಾರ್ಮಿಕರಿಗೆ ಅಂತರಾಷ್ಟ್ರೀಯ ಕಾರ್ಮಿಕರ ದಿನದ ಶುಭ ಹಾರೈಕೆಗಳು.











































































error: Content is protected !!
Scroll to Top