ಉದಯ್‌ ಕೋಟ್ಯಾನ್‌ ಬಿಜೆಪಿಯಿಂದ ಉಚ್ಛಾಟನೆಗೆ ಅಸಮಾಧಾನ

ಕಾರ್ಕಳ : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ವ್ಯಾಪ್ತಿಯನ್ನು ಒಳಗೊಂಡಿರುವ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಇದರ ಮುಂದಿನ 5 ವರ್ಷಗಳ ಅವಧಿಯ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಪಕ್ಷದ ವಿರುದ್ಧವಾಗಿ ಸ್ಪರ್ಧಿಸುತ್ತಿರುವ ಕಾರಣದಿಂದಾಗಿ ಜಿಲ್ಲಾ ಕಾರ್ಯದರ್ಶಿ ಸ್ಥಾನದಿಂದ ಉದಯ ಎಸ್‌. ಕೋಟ್ಯಾನ್‌ ಅವರನ್ನು ಬಿಜೆಪಿ ವಜಾಗೊಳಿಸಿ, ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷಗಳ ಕಾಲ ಉಚ್ಚಾಟಿಸಿತ್ತು. ಪಕ್ಷದ ಈ ನಿರ್ಧಾರದಿಂದ ಅಸಮಾಧಾನಗೊಂಡ ಉದಯ್‌ ಕೋಟ್ಯಾನ್‌ ಅವರ ಊರು ಇರ್ವತ್ತೂರಿನ ಗ್ರಾಮ ಪಂಚಾಯತಿಯ 6 ಮಂದಿ ಬಿಜೆಪಿ ಬೆಂಬಲಿತ ಸದಸ್ಯರು ತಮ್ಮ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಪಂಚಾಯತ್‌ ಉಪಧ್ಯಕ್ಷೆ ದೀಪಾ ಶ್ರೀನಾಥ್‌, ಸದಸ್ಯರಾದ ಶೇಖರ್‌ ಅಂಚನ್‌, ಬಾಲಕೃಷ್ಣ ಶೆಟ್ಟಿ, ಕವಿತಾ ಶಂಕರ್‌, ಅನಿತಾ ಕುಲಾಲ್‌ ಹಾಗೂ ಲಲಿತಾ ನಾಯ್ಕ್‌ ತಮ್ಮ ಸದಸ್ಯ ಸ್ಥಾನಕ್ಕೆ ರಾಜಿನಾಮೆ ನೀಡಿರುವವರು.









































































































error: Content is protected !!
Scroll to Top