ನಾನು ಕಾಂಗ್ರೆಸ್‌ ಸೇರಿಲ್ಲ, ಸ್ವತಂತ್ರ ಅಭ್ಯರ್ಥಿ – ಉದಯ ಎಸ್. ಕೋಟ್ಯಾನ್‌ ಪ್ರತಿಕ್ರಿಯೆ

ಕಾರ್ಕಳ : ನಾನು ಕಾಂಗ್ರೆಸ್‌ ಪಕ್ಷಕ್ಕೆ ಸೇರಿಲ್ಲ. ಬಿಜೆಪಿಯಿಂದ ಉಚ್ಚಾಟನೆ ಮಾಡಿರುವ ಕುರಿತು ನನ್ನ ಗಮನಕ್ಕೆ ಬಂದಿಲ್ಲ ಎಂದು ಬಿಜೆಪಿ ಜಿಲ್ಲಾ ಕಾರ್ಯದರ್ಶಿಯಾಗಿದ್ದ, ಜಿ.ಪಂ. ಮಾಜಿ ಸದಸ್ಯ ಉದಯ ಎಸ್.‌ ಕೋಟ್ಯಾನ್‌ ನ್ಯೂಸ್‌ ಕಾರ್ಕಳಕ್ಕೆ ತಿಳಿಸಿದ್ದಾರೆ.
ನಾನು ಕೆಎಂಎಫ್‌ ಅಭ್ಯರ್ಥಿಯಾಗಲು ಪ್ರಬಲ ಆಕಾಂಕ್ಷಿಯಾಗಿದ್ದೆ. ಆದರೆ ಸಹಕಾರ ಭಾರತಿ ನನಗೆ ಅವಕಾಶ ನೀಡಿಲ್ಲ. ಕಳೆದ ಬಾರಿಯೂ ಆಕಾಂಕ್ಷಿಯಾಗಿದ್ದು ಪಕ್ಷದ ಪ್ರಮುಖರ ಸೂಚನೆಯಂತೆ ನಾಮಿನೇಷನ್‌ ವಾಪಸ್‌ ಪಡೆದಿದ್ದೆ. ನಾನೀಗ ಸ್ವತಂತ್ರ ಅಭ್ಯರ್ಥಿಯಾಗಿದ್ದೇನೆಯೇ ಹೊರತು ಕಾಂಗ್ರೆಸ್‌ ಅಭ್ಯರ್ಥಿಯಲ್ಲ ಎಂದವರು ಸ್ಪಷ್ಟಪಡಿಸಿರುತ್ತಾರೆ.





























































































































error: Content is protected !!
Scroll to Top