ಕಾರ್ಕಳ : ಮಿಯ್ಯಾರು ಸ. ಹಿ. ಪ್ರಾ. ಸಮುದಾಯದತ್ತ ಶಾಲಾ ಹಾಗೂ 3 ಕಂಪ್ಯೂಟರ್‌ಗಳ ಹಸ್ತಾಂತರ ಕಾರ್ಯಕ್ರಮ ನಡೆಯಿತು. ಗ್ರೂಪ್ ಆಫ್ ಸಾಗರ್ ಚೇರ್‌ಮ್ಯಾನ್ ಜಯರಾಮ್ ಬನಾನ್ ಇವರು ನೀಡಿದ ಮೂರು ಕಂಪ್ಯೂಟರ್‌ಗಳನ್ನು, ದಿನೇಶ್ ಬನಾನ್ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ವಿಜಯಶೆಟ್ಟಿ, ಉಪಾಧ್ಯಕ್ಷೆ ದೀಪ್ತಿ ದಿನೇಶ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಜಿತ್ ಕುಮಾರ್, ಮಾರ್ಗದರ್ಶಿ ಅಧಿಕಾರಿ ಬಜಗೋಳಿ ಪ್ರೌಢಶಾಲಾ ಶಿಕ್ಷಕಿ ಸುಮತಿ, ಕ್ಷೇತ್ರ ಸಂಪನ್ಮೂಲ ಅಧಿಕಾರಿ ಉಮೇಶ್ ಕೆ.ಎಸ್, ಎಸ್.ಡಿ.ಎಂ.ಸಿ ಸದಸ್ಯರು, ಪೋಷಕರು, ವಿದ್ಯಾರ್ಥಿಗಳು, ಶಾಲಾ ಶಿಕ್ಷಕ ವೃಂದ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯರಾದ ಮನೋಹರ ಪ್ರಾಸ್ತವಿಕ ಮಾತಿನೊಂದಿಗೆ ಎಲ್ಲರನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.






























































