ಕಾರ್ಕಳ : ಟೈರ್ ಪಂಕ್ಚರ್ ಆಗಿ ಖಾಸಗಿ ಬಸ್ಸೊಂದು ನಿಯಂತ್ರಣ ತಪ್ಪಿ ಚರಂಡಿಗಿಳಿದ ಘಟನೆ ಕಾರ್ಕಳ ತಾಲೂಕು ನೆಲ್ಲಿಕಾರು ಸಮೀಪ ಪೆರ್ನೋಡಿ ಎಂಬಲ್ಲಿ ಎ. 1ರಂದು ಸಂಭವಿಸಿದೆ. ಧರ್ಮಸ್ಥಳದಿಂದ ಉಡುಪಿ ಕಡೆಗೆ ತೆರಳುತ್ತಿದ್ದ ತ್ರಿವೇಣಿ ಬಸ್ ಪೆರ್ನೋಡಿಯಲ್ಲಿ ಟಯರ್ ಪಂಕ್ಚರ್ ಆಗಿ ನಿಯಂತ್ರಣ ತಪ್ಪಿ ಚರಂಡಿಯತ್ತ ಸಾಗಿದೆ. ಬಸ್ಸಿನಲ್ಲಿ 15 ಮಂದಿ ಪ್ರಯಾಣಿಕರಿದ್ದು ಘಟನೆಯಿಂದ ಯಾವುದೇ ಅನಾಹುತ ಸಂಭವಿಸದೇ ಪಾರಾಗಿದ್ದಾರೆ. ಕೆಲ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯವಾಗಿದೆ ಎಂದು ತಿಳಿದುಬಂದಿದೆ.
ಟೈರ್ ಪಂಕ್ಚರ್ : ನೆಲ್ಲಿಕಾರು ಬಳಿ ಖಾಸಗಿ ಬಸ್ ಚರಂಡಿಗೆ






























































