ಕಾರ್ಕಳ : ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡೆನೆಂದು ನೊಂದು ಬಾಲಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾ. 27ರಂದು ಎಳ್ಳಾರೆ ಗ್ರಾಮದ ಮಂಜರಬೆಟ್ಟಿನಲ್ಲಿ ಸಂಭವಿಸಿದೆ. ತೇಜಸ್ (17) ಆತ್ಮಹತ್ಯೆಗೆ ಶರಣಾದ ಬಾಲಕ. ಈತ 10ನೇ ತರಗತಿ ಪರೀಕ್ಷೆಯ ಕೆಲವು ವಿಷಯಗಳಲ್ಲಿ ಅನುತ್ತೀರ್ಣಗೊಂಡಿದ್ದು ನಂತರ ಅಜೆಕಾರಿನಲ್ಲಿ ಟ್ಯೂಷನ್ ಪಡೆದು ಎಸ್ಸೆಸೆಲ್ಸಿ ಸಪ್ಲಿಮೆಂಟರಿ ಪರೀಕ್ಷೆ ಬರೆದಿರುತ್ತಾನೆ. ಆದರೆ, ಅದರಲ್ಲಿ ಕೂಡ ಅನುತ್ತೀರ್ಣಗೊಂಡ ಕಾರಣ ಜೀವನದಲ್ಲಿ ಜಿಗುಪ್ಸೆಗೊಂಡು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡೆನೆಂದು ಬಾಲಕ ಆತ್ಮಹತ್ಯೆ































