ನಿಟ್ಟೆ : ಕಾಲೇಜು ವಿದ್ಯಾರ್ಥಿ ನಾಪತ್ತೆ

ಕಾರ್ಕಳ : ನಿಟ್ಟೆ ಕಾಲೇಜಿನ ವಿದ್ಯಾರ್ಥಿಯೊಬ್ಬ ನಾಪತ್ತೆಯಾಗಿರುವ ಕುರಿತು ದೂರು ದಾಖಲಿಸಲಾಗಿದೆ. ಬೈಂದೂರು ಸಮೀಪದ ಯಡ್ತರೆ ಗ್ರಾಮದ ಮಹಾಬಲೇಶ್ವರ ಎಂಬವರ ಮಗ ಅಭಿನಂದನ್ (20) ನಾಪತ್ತೆಯಾಗಿರುವ ವಿದ್ಯಾರ್ಥಿ. ಅಭಿನಂದನ್‌ ತಂದೆ ಮಹಾಬಲೇಶ್ವರ ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಸಿದ್ದಾರೆ.

ಅಭಿನಂದನ್‌ ನಿಟ್ಟೆ ಕಾಲೇಜಿನಲ್ಲಿ ದ್ವಿತಿಯ ವರ್ಷದ ವಿಎಲ್‌ಎಸ್‌ಐ ಪದವಿ ತರಗತಿಯಲ್ಲಿ ಕಲಿಯುತ್ತಿದ್ದು, ಕಾಲೇಜಿನ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದನು. ರಜೆಯಲ್ಲಿ ಬೈಂದೂರಿನ ಮನೆಗೆ ಬಂದು ಹೋಗುತ್ತಿದ್ದನು. ಮಾ. 21ರಂದು ಮನೆಗೆ ಬಂದು ಮರುದಿನ ಮನೆಯಿಂದ ಕಾಲೇಜಿಗೆಂದು ಹೋದವನು ಒಂದೆರಡು ಬಾರಿ ಕರೆ ಮಾಡಿದ್ದನು. ಆ ನಂತರ ಕರೆ ಬಾರದೆ ಇದ್ದಾಗ ಮತ್ತು ಕರೆ ಸ್ವೀಕರಿಸದೆ ಇದ್ದಾಗ ಮಹಾಬಲೇಶ್ವರ ಅವರು ಮಾ. 26ರಂದು ನಿಟ್ಟೆ ಕಾಲೇಜಿಗೆ ಹೋಗಿ ಮಗನ ಬಗ್ಗೆ ವಿಚಾರಿಸಿದ್ದಾರೆ. ಆಗ ಆತ ಕಾಲೇಜಿಗೆ ರಜೆ ಹಾಕಿ ಹೋಗಿರುವ ವಿಚಾರ ತಿಳಿದುಬಂದಿದೆ. ಆತ ಮೊಬೈಲ್ ಕಾಲ್ ಕೂಡ ಸ್ವೀಕರಿಸದೆ ನಾಪತ್ತೆಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.









































































































error: Content is protected !!
Scroll to Top