ಕಾರು-ಬೈಕ್ ಡಿಕ್ಕಿ : ಅದೃಷ್ಟವಶಾತ್‌ ಪಾರಾದ ಸವಾರ

ಕಾರ್ಕಳ : ಕಾರು ಹಾಗೂ ಬೈಕ್‌ ನಡುವೆ ಭೀಕರ ಅಫಘಾತ ಸಂಭವಿಸಿ ಅದೃಷ್ಟವಶಾತ್‌ ಬೈಕ್‌ ಸವಾರ ಪ್ರಾಣಾಪಾಯದಿಂದ ಪಾರಾದ ಘಟನೆ ಮಾ. 25ರಂದು ಬೆಳಿಗ್ಗೆ ಎಣ್ಣೆಹೊಳೆಯಲ್ಲಿ ಸಂಭವಿಸಿದೆ. ಕಡ್ತಲ ಗ್ರಾಮದ ಅಶೋಕ್‌ ಆಚಾರ್ಯ ಎಂಬವರು ಹೆಬ್ರಿ ಭಾಗದಿಂದ ಕಾರ್ಕಳ ಕಡೆಗೆ ಬೈಕ್‌ ಸವಾರಿ ಮಾಡಿಕೊಂಡು ಬರುತ್ತಿರುವಾಗ ಕಾರ್ಕಳದಿಂದ ಹೆಬ್ರಿ ಕಡೆಗೆ ಸಾಗುತ್ತಿದ್ದ ಮಾರುತಿ ಸ್ವಿಫ್ಟ್‌ ಕಾರು ಎಣ್ಣೆಹೊಳೆ ಗರಡಿ ಬಳಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್‌ನ್ನು ಸುಮಾರು 20 ಮೀ. ದೂರಕ್ಕೆ ಕಾರು ಎಳೆದೊಯ್ದಿದ್ದು ಚರಂಡಿಗೆ ಜಾರಿದೆ. ಈ ವೇಳೆ ಬೈಕ್‌ ಕಾರಿನಡಿಗೆ ಬಿದ್ದು ಸಂಪೂರ್ಣವಾಗಿ ಜಖಂಗೊಂಡಿದೆ. ಅದೃಷ್ಟವಶಾತ್‌ ಸವಾರ ಅಶೋಕ್‌ ಆಚಾರ್ಯ ಅವರು ಬೈಕ್‌ ಕಾರಿನಡಿಗೆ ಬೀಳುವ ಮೊದಲೇ ಬೈಕ್‌ನಿಂದ ನೆಲಕ್ಕೆ ಬಿದ್ದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ.





























































































































error: Content is protected !!
Scroll to Top