ಕಾರ್ಕಳ : ಕಾರ್ಕಳದಲ್ಲಿ ಮಾ. 12ರ ಸಂಜೆ ಬೀಸಿದ ಗಾಳಿಗೆ ವಿವಿಧೆಡೆ ಅಪಾರ ಹಾನಿಯಾಗಿದೆ. ನಿಟ್ಟೆ ಗ್ರಾಮದ ಗುಲಾಬಿ ಅವರ ಮನೆಗೆ ಹಾನಿಯಾಗಿದ್ದು ಅಂದಾಜು 90 ಸಾವಿರ ರೂ. ನಷ್ಟವಾಗಿದೆ. ಕುಕ್ಕುಂದೂರು ಗ್ರಾಮದ ವಲೇರಿಯನ್ ಅರಾನ್ನಾ ನಕ್ರೆ ಅವರ ಮನೆಗೆ ಭಾಗಶಃ ಹಾನಿಯಾಗಿದೆ. ಇದರಿಂದ 25 ಸಾವಿರ ರೂ. ನಷ್ಟವಾಗಿದೆ. ಕಾಂತಾವರ ಸಂಪ ಮೇರ ಅವರ ಮನೆ ಹಾನಿಗೀಡಾಗಿದ್ದು 30 ಸಾವಿರ ರೂ., ಮುಂಡ್ಕೂರು ಗ್ರಾಮದ ಸೀನ ಮೂಲ್ಯ ಅವರ ಮನೆ ಹಾನಿಗೀಡಾಗಿದ್ದು 80 ಸಾವಿರ ರೂ., ಇದೇ ಗ್ರಾಮದ ಸುಂದರಿ ಅವರ ಮನೆ ಹಾನಿಗೀಡಾಗಿದ್ದು 50 ಸಾವಿರ ರೂ., ಮುಂಡ್ಕೂರು ಚಂದು ಪೂಜಾರಿ ಅವರ ಮನೆ ಹಾನಿಗೀಡಾಗಿದ್ದು 20 ಸಾವಿರ ರೂ., ರೆಂಜಾಳ ಸಂಜೀವ ಮೇರ ಅವರ ಮನೆ ಹಾನಿಗೀಡಾಗಿದ್ದು 20 ಸಾವಿರ ರೂ., ನಲ್ಲೂರು ಗ್ರಾಮದ ಲಕ್ಷ್ಮೀ ಅವರ ಮನೆ ಹಾನಿಗೀಡಾಗಿದ್ದು 10 ಸಾವಿರ ರೂ., ಮುಂಡ್ಕೂರು ಪ್ರೇಮ ಕೆ. ಶೆಟ್ಟಿ ಅವರ ಮನೆ ಹಾನಿಗೀಡಾಗಿದ್ದು 40 ಸಾವಿರ ರೂ., ಎರ್ಲಪಾಡಿ ಪ್ರಕಾಶ್ ಆಚಾರ್ಯ ಅವರ ದನದ ಕೊಟ್ಟಿಗೆ ಹಾನಿಗೀಡಾಗಿದ್ದು 5000ರೂ. ನಷ್ಟವುಂಟಾಗಿದೆ.
ಕಾರ್ಕಳದಲ್ಲಿ ಗುರುವಾರ ಬೀಸಿದ ಗಾಳಿಗೆ ಅಪಾರ ಹಾನಿ































































