ಉತ್ತರ ಪ್ರದೇಶ ಅಸೆಂಬ್ಲಿಯಲ್ಲಿ ಡಿಕೆಶಿಯನ್ನು ಹೊಗಳಿದ ಯೋಗಿ

ಬೆಂಗಳೂರು : ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ವಿಧಾನಸಭೆಯಲ್ಲಿ ಮಹಾಕುಂಭ ಆಯೋಜನೆಯ ಕುರಿತು ಮಾತನಾಡುತ್ತಾ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಹೊಗಳಿ ಮಾತನಾಡಿದ್ದಾರೆ.
ಮಹಾಕುಂಭ ಆಯೋಜನೆಯ ಕುರಿತು ಸಮಾಜವಾದಿ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ ಮಾತನಾಡಿದ ಯೋಗಿ ಆದಿತ್ಯನಾಥ್​ ಅವರು, ಕರ್ನಾಟಕದ ಉಪಮುಖ್ಯಮಂತ್ರಿಗಳ ಹೇಳಿಕೆಯನ್ನು ಉಲ್ಲೇಖಿಸಿ ಅಖಿಲೇಶ್ ಯಾದವ್ ಅವರನ್ನು ತೀವ್ರ ತರಾಟೆಗೆ ತಗೆದುಕೊಂಡಿದ್ದಾರೆ.

ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಅವರಂತಹ ಅನೇಕ ನಾಯಕರು ಮಹಾಕುಂಭ ಮೇಳದಲ್ಲಿ ಭಾಗವಹಿಸಿ ಪುಣ್ಯ ಸ್ನಾನ ಮಾಡಿ, ಆಯೋಜನೆಯ ಕುರಿತು ಶ್ಲಾಘಿಸಿ ಮಾತನಾಡಿದ್ದಾರೆ ಎಂದು ಈ ವೇಳೆ ಯೋಗಿ ಆದಿತ್ಯನಾಥ್​ ಹೇಳಿದ್ದಾರೆ. ಮುಂದುವರೆದು ಮಾತನಾಡಿದ ಅವರು ಡಿಕೆಶಿ ಮಹಾಕುಂಭ ಮೇಳದ ಬಗ್ಗೆ ವ್ಯಕ್ತಪಡಿಸಿದ್ದ ಮೆಚ್ಚುಗೆಯ ಮಾತುಗಳನ್ನು ಸಭೆಯಲ್ಲಿ ಪ್ರಸ್ತಾಪಿದರು. “ಇಂತಹ ಪವಿತ್ರ ಆಯೋಜನೆಗಾಗಿ ಎಲ್ಲಾ ಆಯೋಜಕರಿಗೆ ಧನ್ಯವಾದಗಳು. ಇದು ಎಲ್ಲರ ಜೀವನದ ಐತಿಹಾಸಿಕ ಕ್ಷಣವಾಗಿದೆ. ಸರಕಾರದ ಈ ಆಯೋಜನೆ ಸಾಮಾನ್ಯವಾದ ಕೆಲಸವಲ್ಲ. ಸರಕಾರ ತುಂಬಾ ಒಳ್ಳೆಯ ಕೆಲಸ ಮಾಡಿದೆ. ಮಹಾಕುಂಭ ಮೇಳದಲ್ಲಿ ಭಾಗಿಯಾದ ನನ್ನ ಅನುಭವ ಅತ್ಯುತ್ತಮವಾಗಿತ್ತು” ಎಂದು ಡಿಕೆಶಿ ಹೇಳಿದ್ದರು.





























































































































error: Content is protected !!
Scroll to Top