ಕಾರ್ಕಳ : ನಾಗರ ಹಾವು ಕಚ್ಚಿ ವ್ಯಕ್ತಿಯೋರ್ವರು ಸಾವನಪ್ಪಿದ ಘಟನೆ ನಲ್ಲೂರು ಪರಪ್ಪಾಡಿ ಗ್ರಾಮದಲ್ಲಿ ಸಂಭವಿಸಿದೆ. ಸಂತೋಷ (32) ಮೃತ ದುರ್ದೈವಿ. ಇವರು ಫೆ. 19ರಂದು ಸಂಜೆ ಮನೆಯ ಹತ್ತಿರ ಕೃಷಿ ಕೆಲಸ ಮಾಡುತ್ತಿದ್ದಾಗ ಎಡಕಾಲಿಗೆ ನಾಗರಹಾವು ಕಚ್ಚಿದೆ. ತಕ್ಷಣವೇ ಅವರ ತಾಯಿ ಮತ್ತು ಸಂಬಂಧಿ ಸತೀಶ ಎಂಬವರು ಚಿಕಿತ್ಸೆಗಾಗಿ ಕಾರ್ಕಳದ ಡಾ.ಟಿ.ಎಂ.ಎ. ಪೈ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಫೆ. 25ರಂದು ಸಂತೋಷ್ ಅವರನ್ನು ಉಡುಪಿ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಾ. 2ರಂದು ಬೆಳಿಗ್ಗೆ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಪ್ರಕರಣ ದಾಖಲಾಗಿದೆ.
ನಲ್ಲೂರು : ನಾಗರ ಹಾವು ಕಚ್ಚಿ ವ್ಯಕ್ತಿ ಸಾವು






























































