14 ವರ್ಷದ ಬಾಲಕನ ಜೊತೆ ಓಡಿಹೋದ 35ರ ಹರೆಯದ ಮಹಿಳೆ!

ತಿರುವನಂತಪುರ: 35 ವರ್ಷದ ವಿವಾಹಿತ ಮಹಿಳೆಯೊಬ್ಬಳು ತನ್ನ ಮಗನ ವಯಸ್ಸಿನ ಬಾಲಕನ ಜೊತೆ ಓಡಿಹೋದ ಘಟನೆ ಕೇರಳದ ಪಾಲಕ್ಕಾಡ್‌ನಲ್ಲಿ ಸಂಭವಿಸಿದೆ. ಆಕೆ ತನ್ನ ಮಗನ ಸ್ನೇಹಿತನ ಜತೆ ಓಡಿ ಹೋಗಿದ್ದಾಳೆ ಎಂದು ತಿಳಿದುಬಂದಿದೆ. ಪಾಲಕ್ಕಾಡ್‌ನ ಅಲತೂರ್‌ನ ಬಾಲಕ ಫೆಬ್ರವರಿ 25ರಂದು ಶಾಲೆಗೆ ಹೋದವನು ಮನೆಗೆ ಹಿಂದಿರುಗಿರಲಿಲ್ಲ, ತನಿಖೆ ನಡೆಸಿದಾಗ ಅವನು ಮಹಿಳೆಯೊಂದಿಗೆ ಓಡಿ ಹೋಗಿದ್ದಾನೆ ಎಂಬುದು ತಿಳಿದು ಬಂದಿದೆ.
ಆಲತ್ತೂರು ಪೊಲೀಸರು ಬಾಲಕ ಮತ್ತು ಮಹಿಳೆಯನ್ನು ಎರ್ನಾಕುಲಂನಲ್ಲಿ ಪತ್ತೆಹಚ್ಚಿದ್ದು, ಆಕೆಯ ವಿರುದ್ಧ ಅಪಹರಣ ಪ್ರಕರಣ ದಾಖಲಿಸಿದ್ದಾರೆ. ಬಾಲಕ ಅಪ್ರಾಪ್ತ ವಯಸ್ಕನಾಗಿರುವುದರಿಂದ, ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಮಹಿಳೆ ತನ್ನ ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು. ಆಕೆಯ ಜೊತೆಗಿದ್ದ ಹುಡುಗ ಆಕೆಯ 14 ವರ್ಷದ ಮಗನ ಸ್ನೇಹಿತ ಎಂದು ವರದಿಯಾಗಿದೆ.
ಶಾಲಾ ಪರೀಕ್ಷೆ ಮುಗಿದ ನಂತರ ಬಾಲಕ ಮನೆಗೆ ಹಿಂತಿರುಗದ ಕಾರಣ ಮನೆಯವರು ಆತನನ್ನು ಹುಡುಕಲು ಪ್ರಾರಂಭಿಸಿದ್ದರು. ನಂತರ ಬಾಲಕ ಮಹಿಳೆಯೊಂದಿಗೆ ಇದ್ದಾನೆ ಎಂದು ಅವರಿಗೆ ತಿಳಿದುಬಂದಿದೆ. ಇದರಿಂದಾಗಿ ಅವರು ಅಲತ್ತೂರು ಪೊಲೀಸರಿಗೆ ದೂರು ನೀಡಿದರು. ಮಹಿಳೆಯನ್ನು ಜೈಲಿಗೆ ಕಳುಹಿಸಲಾಗಿದೆ. ಆ ಹುಡುಗ ತನ್ನೊಂದಿಗೆ ಸ್ವಇಚ್ಛೆಯಿಂದ ಹೋಗಿದ್ದ ಎಂದು ಆಕೆ ಪೊಲೀಸರಿಗೆ ತಿಳಿಸಿದ್ದಾಳೆ.





























































































































error: Content is protected !!
Scroll to Top