ಕಾರ್ಕಳ : ಜೆಸಿಐ ಕಾರ್ಕಳ ಹಾಗೂ ಲೇಡಿ ಜೆಸಿ ವಿಭಾಗದ ವತಿಯಿಂದ ಬಂಗ್ಲೆಗುಡ್ಡೆ ಅಂಗನವಾಡಿ ಕೇಂದ್ರಕ್ಕೆ ಇನ್ವರ್ಟರ್ ಕೊಡುಗೆ ನೀಡಲಾಯಿತು. ಜೆಸಿಐ ಕಾರ್ಕಳದ ಪೂರ್ವ ಅಧ್ಯಕ್ಷ ದಿನೇಶ್ ಕೆ. ಮತ್ತು ಶೇಖರ್ ಎಚ್. ಇನ್ವರ್ಟರ್‌ನ್ನು ಅಂಗನವಾಡಿ ಕೇಂದ್ರಕ್ಕೆ ಹಸ್ತಾಂತರಿಸಿದರು. ಇದೇ ಸಂದರ್ಭ ಮಕ್ಕಳಿಗೆ ಪುಸ್ತಕ, ಕಲರ್ ಪೆನ್ಸಿಲ್ ಮತ್ತು ನೀರಿನ ಬಾಟಲಿಯನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ಜೆ.ಸಿ.ಐ. ಕಾರ್ಕಳದ ಕಾರ್ಯದರ್ಶಿ ಸುಶ್ಮಿತಾ ರಾವ್, ಉಪಾಧ್ಯಕ್ಷ ರಿಜ್ವಾನ್ ಖಾನ್, ಲೇಡಿ ಜೇಸಿ ನಿರ್ದೇಶಕಿ ಶಾಹೀನ ಖಾನ್ ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ಜಯಂತಿ, ಸಹಾಯಕಿ ಸುರೇಖಾ, ಆಶಾ ಕಾರ್ಯಕರ್ತೆ ಜಲಜಾಕ್ಷಿ ಮುಂತಾದವರು ಉಪಸ್ಥಿತರಿದ್ದರು.
ಜೆಸಿಐ ಕಾರ್ಕಳ – ಲೇಡಿ ಜೆಸಿ ವಿಭಾಗ : ಬಂಗ್ಲೆಗುಡ್ಡೆ ಅಂಗನವಾಡಿ ಕೇಂದ್ರಕ್ಕೆ ಇನ್ವರ್ಟರ್ ಕೊಡುಗೆ






























































