ತಾಲೂಕಿನೆಲ್ಲೆಡೆ ಶಿವ ದೇವಾಲಯಗಳಲ್ಲಿ ಮಹಾ ಶಿವರಾತ್ರಿ ಸಂಭ್ರಮ

ಕಾರ್ಕಳ : ತಾಲೂಕಿನೆಲ್ಲೆಡೆ ಶಿವ ದೇವಾಲಯಗಳಲ್ಲಿ ಇಂದು ಮಹಾ ಶಿವರಾತ್ರಿ ಹಬ್ಬದ ಸಂಭ್ರಮ-ಸಡಗರ. ಮುಂಜಾನೆಯಿಂದಲೇ ದೇವಾಲಯಗಳಲ್ಲಿ ರುದ್ರಾಭಿಷೇಕ, ಶಿವನಿಗೆ ವಿಶೇಷ ಅಭಿಷೇಕ ಸೇರಿದಂತೆ ವಿಶೇಚ ಪೂಜೆಗಳು ಆರಂಭವಾಗಿದೆ.

ಪೆರ್ವಾಜೆ ಮಹಾಲಿಂಗೇಶ್ವರ ದೇವಸ್ಥಾನ

ಪೆರ್ವಾಜೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬೆಳಗ್ಗಿನಿಂದಲೇ ಪೂಜೆ, ಅಭಿಷೇಕ, ಭಜನಾ ಕಾರ್ಯಕ್ರಮಗಳು ನಡೆಯುತ್ತಿದ್ದು, ರಾತ್ರಿ ವಿಶೇಷ ಪೂಜೆ, ಜಾಗರಣಾ ನಡೆಯಲಿದೆ.

ಕಾಡುಹೊಳೆ ಶ್ರೀ ಜಂಗಮೇಶ್ವರ ಮಠ

ಕಾಡುಹೊಳೆ ಶ್ರೀ ಜಂಗಮೇಶ್ವರ ಮಠದಲ್ಲಿ ಪ್ರಧಾನ ಅರ್ಚಕ ವಿದ್ವಾನ್ ಗುಡ್ಡೆಯಂಗಡಿ ರಾಘವೇಂದ್ರ ಭಟ್ ಅವರ ನೇತೃತ್ವದಲ್ಲಿ ಆಡಳಿತ ಮೊಕ್ತೇಸರ ಚಿರಂಜಿತು ಅಜಿಲ ಅವರ ಸಹಕಾರದಲ್ಲಿ ಶಿವರಾತ್ರಿ ಪ್ರಯುಕ್ತ ಪ್ರಾರ್ಥನೆ, ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ, ರುದ್ರಪಾರಾಯಣ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ಸಿದ್ದಿವಿನಾಯಕ ಭಜನಾ ಮಂಡಳಿ ತೆಳ್ಳಾರು ಕಾರ್ಕಳ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು. ‌ ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ ಸದಸ್ಯರು, ಗ್ರಾಮಸ್ಥರು, ಭಕ್ತಾದಿಗಳು ಭಾಗವಹಿಸಿದ್ದರು.

ಶಿವತಿಕೆರೆ ಶ್ರೀ ಉಮಾಮಹೇಶ್ವರ ದೇವಸ್ಥಾನ
ಶಿವತಿಕೆರೆ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಫೆ. 23ರಿಂದ ದೇವಸ್ಥಾನದ ಹದಿನಾರನೇ ವಾರ್ಷಿಕ ಜಾತ್ರೋತ್ಸವ ಪ್ರಾರಂಭಗೊಂಡಿದ್ದು, ಇಂದು ಶಿವರಾತ್ರಿ ಉತ್ಸವದೊಂದಿಗೆ ರುದ್ರಾಭಿಷೇಕ, ನವಕ ಪ್ರಧಾನ ಹೋಮ, ಕಲಾಶಾಭಿಷೇಕ, ಚೂರ್ಣೋತ್ಸವ, ಮಹಾಪೂಜೆ, ಪಲ್ಲಪೂಜೆ ನಡೆಯಿತು. ಸಂಜೆ ಸಹಸ್ರ ಬಿಲ್ವಾರ್ಚನೆ, ಉತ್ಸವ, ಶ್ರೀ ಕ್ಷೇತ್ರದ ಧರ್ಮದೈವಗಳಿಗೆ ನೇಮೋತ್ಸವ ನಡೆಯಲಿದೆ.

ಕೆರ್ವಾಶೆ ಮಹಾಲಿಂಗೇಶ್ವರ, ನಕ್ರೆ ಮಹಾಲಿಂಗೇಶ್ವರ, ಮಿಯ್ಯಾರು ಮಹಾಲಿಂಗೇಶ್ವರ, ಕಣಂಜಾರು ಬ್ರಹ್ಮಲಿಂಗೇಶ್ವರ, ಬೀದಿ ಬೈಲೂರು ಮಹಾಲಿಂಗೇಶ್ವರ, ರೆಂಜಾಳ ಬ್ರಹ್ಮಲಿಂಗೇಶ್ವರ ಸೇರಿದಂತೆ ತಾಲೂಕಿನೆಲ್ಲೆಡೆ ಶಿವ ದೇವಾಲಯಗಳಲ್ಲಿ ವಿಶೇಷ ಪೂಜೆ, ಅಭಿಷೇಕ, ಭಜನೆ ನಡೆಯುತ್ತಿದೆ.

























































































































error: Content is protected !!
Scroll to Top