ಜನನಿ ಮಿತ್ರ ಮಂಡಳಿ ನೂತನ ಪದಾಧಿಕಾರಿಗಳ ಆಯ್ಕೆ

ದಿವಾಕರ್‌ ಎಂ. ಬಂಗೇರ ಅ‍ಧ್ಯಕ್ಷ – ಪ್ರವೀಣ್‌ ಮೂಲ್ಯ ಕಾರ್ಯದರ್ಶಿ

ಕಾರ್ಕಳ : ಜನನಿ ಮಿತ್ರ ಮಂಡಳಿ ವಾಂಟ್ರಾಯಿ ಪದವು ಇದರ ನೂತನ ಅಧ್ಯಕ್ಷರಾಗಿ ದಿವಾಕರ್ ಎಂ. ಬಂಗೇರ ಹಾಗೂ ಕಾರ್ಯದರ್ಶಿಯಾಗಿ ಪ್ರವೀಣ್ ಮೂಲ್ಯ ಆಯ್ಕೆಯಾಗಿರುತ್ತಾರೆ. ಫೆ. 16ರಂದು ಸಂಘದ ಕಚೇರಿಯಲ್ಲಿ ನಡೆದ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಜತೆ ಕಾರ್ಯದರ್ಶಿಯಾಗಿ ಯಶವಂತ್ ಗುರ್ಬಿ, ಗೌರವಾಧ್ಯಕ್ಷರಾಗಿ ಶ್ರೀಧರ್ ಸುವರ್ಣ, ಉಪಾಧ್ಯಕ್ಷರಾಗಿ ಬಾಲಕೃಷ್ಣ ಹೇಕಳ ಮತ್ತು ಚಂದ್ರಿಕಾ ದಿವಾಕರ್ ಅವರನ್ನು ಆಯ್ಕೆ ಮಾಡಲಾಗಿದೆ.
ಕೋಶಾಧಿಕಾರಿಯಾಗಿ ಪ್ರಶಾಂತ್ ಆಚಾರ್ಯ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸದಾನಂದ ಮೋಹನ್ ನಕ್ರೆ ಹಾಗೂ ನಿಕಿತಾ ಮತ್ತು ಕ್ರೀಡಾ ಕಾರ್ಯದರ್ಶಿಯಾಗಿ ಸದಾಶಿವ ನಕ್ರೆ, ಚೇತನ್ ಮೂಲ್ಯ ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ಕೃಷ್ಣ, ಉದಯ ಪೂಜಾರಿ, ಜಯಂತಿ ಮೂಲ್ಯ, ಪೂರ್ಣಿಮಾ ಪ್ರಕಾಶ್ ಜೋಗಿ, ಜ್ಯೋತಿ ಕುಲಾಲ್, ಗೌರವ ಸಲಹೆಗಾರರಾಗಿ ಜಯ ಮೂಲ್ಯ, ಸತೀಶ್ ಪೂಜಾರಿ, ಆನಂದ ಕಜೆ, ಹರೀಶ್ ಕುಲಾಲ್ ಹಾಗೂ ಜ್ಯೋತಿ ಪೂಜಾರಿ, ಪ್ರಚಾರ ಸಮಿತಿಗೆ ಸಂತೋಷ್ ಗುರ್ಬಿ ಮತ್ತು ಶಿವಾನಂದ ಸುವರ್ಣ ಅವರನ್ನು ಆಯ್ಕೆ ಮಾಡಲಾಗಿದೆ.









































































































error: Content is protected !!
Scroll to Top