ಸಾಣೂರು ಹಾಲು ಉತ್ಪಾದಕರ ಸಹಕಾರಿ ಸಂಘ

ಕಾರ್ಕಳ : ಸಾಣೂರು ಹಾಲು ಉತ್ಪಾದಕರ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಮೂರನೇ ಅವಧಿಗೆ ಸಾಣೂರು ನರಸಿಂಹ ಕಾಮತ್ ಪುನಾರಾಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ರಾಯಲ್ ನರೋನ್ನ ಆಯ್ಕೆಯಾಗಿದ್ದಾರೆ. ಫೆ. 17ರಂದು ಸಂಘದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಅವಿರೋಧವಾಗಿ ನಡೆಯಿತು. ಶಹನಾಜ್ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

ಸಾಣೂರು ನರಸಿಂಹ ಕಾಮತ್ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ, ಭಾರತಿ ಟೂರಿಸಂ ಡೆವಲಪ್ಮೆಂಟ್ ಕೋ ಆಪರೇಟರೇಟೀವ್, ಪರಂಪರ ವಿವಿಧೋದ್ದೇಶ ಸಹಕಾರಿ ಸಂಘ ಹಾಗೂ ಸಾಣೂರು ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕರಾಗಿರುತ್ತಾರೆ. ಕಳೆದ ಎರಡು ದಶಕಗಳಿಂದ ಸಹಕಾರಿ ಕ್ಷೇತ್ರದ ರಾಷ್ಟ್ರಮಟ್ಟದ ಸಂಘಟನೆ ಸಹಕಾರ ಭಾರತಿಯಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿ, ಇತ್ತೀಚೆಗೆ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಜವಾಬ್ದಾರಿಯನ್ನು ವಹಿಸಿಕೊಂಡಿರುತ್ತಾರೆ. ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ರಾಯಲ್ ನೋರನ್ನ ಅವರು ಪ್ರಗತಿಪರ ಯುವ ಕೃಷಿಕರಾಗಿದ್ದಾರೆ.

ಸಂಘದ ನೂತನ ನಿರ್ದೇಶಕರಾಗಿ ಕೊರಗಶೆಟ್ಟಿ, ಸೋಮಶೇಖರ್, ಜಯ ಶೆಟ್ಟಿಗಾರ್, ಜಯಾನಂದ, ಪ್ರವೀಣ ಶೆಟ್ಟಿ, ಪೂರ್ಣಿಮಾ ಕಿಣಿ, ಯಶೋಧ ಆರ್. ಸುವರ್ಣ, ಸಂಜೀವಿ, ದಿಲೀಪ್ ಶೆಟ್ಟಿ, ಸೈಮನ್ ಡಿ’ಸೋಜ, ಶ್ರೀಧರ ಸಮಗಾರ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.





























































































































error: Content is protected !!
Scroll to Top