ಕಾರ್ಕಳ : ಕುಂಭ ನಿಧಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿ. ಬೆಳ್ಮಣ್ ಇದರ 30ನೇ ಸ್ವ ಸಹಾಯ ಗುಂಪು ಶ್ರೀ ಮಂಜುನಾಥೇಶ್ವರ ಸ್ವ ಸಹಾಯ ಸಂಘದ ಉದ್ಘಾಟನಾ ಉದ್ಘಾಟನಾ ಸಮಾರಂಭ ಇನ್ನಾ ಗ್ರಾಮದ ಕೋಡಿ ಗಜೇಂದ್ರ ಮೂಲ್ಯ ಅವರ ಮನೆಯಲ್ಲಿ ನಡೆಯಿತು. ಸೊಸೈಟಿ ಅಧ್ಯಕ್ಷ ಕುಶ ಆರ್. ಮೂಲ್ಯ ಇನ್ನಾ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಸೊಸೈಟಿಯ ಗ್ರಾಹಕರ ಸಹಕಾರದಿಂದ ಮೂರು ತಿಂಗಳಲ್ಲಿ 1 ಕೋ. ರೂ. ಗಿಂತಲೂ ಅಧಿಕ ಆರ್ಥಿಕ ವಹಿವಾಟು ನಡೆಸಲು ಸಾಧ್ಯವಾಯಿತು ಎಂದ ಅವರು ಸೊಸೈಟಿಯು ಸದಸ್ಯರಿಗೆ ವಿವಿಧ ಉಪಯುಕ್ತ ಸೌಲಭ್ಯಗಳನ್ನು ಒದಗಿಸುವ ಮೂಲಕ ಅವರ ಆರ್ಥಿಕ ಸ್ಥಿತಿಯನ್ನು ಗಟ್ಟಿಯಾಗಿಸಲು ನೆರವಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸೊಸೈಟಿಯ ಉಪಾಧ್ಯಕ್ಷ ಜಗನ್ನಾಥ್ ಮೂಲ್ಯ ಹಾಗೂ ನಿರ್ದೇಶಕಿ ಪ್ರತೀಮಾ ಶ್ರೀಧರ್ ಉಪಸ್ಥಿತರಿದ್ದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಬ್ರಿಜೇಶ್ ಕುಲಾಲ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.
ಇನ್ನಾ : ಶ್ರೀ ಮಂಜುನಾಥೇಶ್ವರ ಸ್ವ ಸಹಾಯ ಸಂಘ ಉದ್ಘಾಟನೆ






























































