ಮುನಿಯಾಲು : ಕಬಡ್ಡಿ ಪಟು ದಿ. ಪ್ರೀತಮ್ ಶೆಟ್ಟಿ ಸ್ಮರಣಾರ್ಥ ಸ್ವಯಂ ಪ್ರೇರಿತ ರಕ್ತದಾನ ಶಿಬಿರ – ಹೃದಯ ಉಚಿತ ತಪಾಸಣೆ

ಹೆಬ್ರಿ : ಹಿಂದೂ ಹೆಲ್ಪ್ ಲೈನ್ ಜನಸೇವಾ ಟ್ರಸ್ಟ್ ಮುನಿಯಾಲು ಹಾಗೂ ಹಲವಾರು ಸಂಘ ಸಂಸ್ಥೆಗಳ ಸಹಯೋಗದಲ್ಲಿ ಕಬಡ್ಡಿ ಪಟು ದಿ. ಪ್ರೀತಮ್ ಶೆಟ್ಟಿ ಸ್ಮರಣಾರ್ಥ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಾಗೂ ಉಚಿತ ಹೃದಯ ತಪಾಸಣ ಶಿಬಿರ ಮತ್ತು ಅನಾರೋಗ್ಯ ಪೀಡಿತರಿಗೆ ಸಹಾಯಧನ ವಿತರಣೆ ಫೆ. 9ರಂದು ಮುನಿಯಾಲಿನ ಪದ್ಮಾವತಿ ಕಲಾಮಂದಿರದಲ್ಲಿ ನಡೆಯಿತು.

ಮುಂಬೈ ಉದ್ಯಮಿ ಗಿರೀಶ್ ಶೆಟ್ಟಿ ತೆಳ್ಳಾರು ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಹಿಂದೂ ಹೆಲ್ಪ್ ಲೈನ್ ಗೌರವಾಧ್ಯಕ್ಷ ಡಾ. ಸುದರ್ಶನ್ ಹೆಬ್ಬಾರ್, ಕೆ.ಎಮ್.ಸಿ. ಮಂಗಳೂರು ಇಲ್ಲಿಯ ಡಾ. ದಿತೇಶ್. ಎಂ., ಮಣಿಪಾಲ ಕೆ.ಎಂ.ಸಿ.ಯ ಡಾ. ಗಣೇಶ್ ಮೋಹನ್, ಕಾಡುಹೊಳೆ ಜಂಗಮೇಶ್ವರ ಮಠದ ಅರ್ಚಕ ರಾಘವೇಂದ್ರ ಭಟ್, ಕಾರ್ಕಳ ರೋಟರಿ ಕ್ಲಬ್ ಅಧ್ಯಕ್ಷ ಉಪೇಂದ್ರ ವಾಗ್ಲೆ, ಮುನಿಯಾಲಿನ ಉದ್ಯಮಿಗಳಾದ ಎಂ. ದಿನೇಶ್ ಪೈ, ಮುನಿಯಾಲು ಬಿಲ್ಲವ ಸಂಘದ ಅಧ್ಯಕ್ಷ ಟಿ. ಮಂಜುನಾಥ್, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಉಡುಪಿ ಇದರ ಅಧ್ಯಕ್ಷ ಸತೀಶ್ ಸಾಲಿಯನ್, ವೆಂಕಟರಮಣ ದೇವಸ್ಥಾನ ಮುನಿಯಾಲು ಇದರ ಆಡಳಿತ ಮೊಕ್ತೇಸರ ಶ್ರೀಧರ್ ಪೈ, ಮುನಿಯಾಲು ಲಯನ್ಸ್ ಕ್ಲಬ್ ಅಧ್ಯಕ್ಷ ಭುಜಂಗ ಶೆಟ್ಟಿ, ಸಿ. ಎ. ನಿತೇಶ್ ಶೆಟ್ಟಿ, ಮುಂಬೈ ಉದ್ಯಮಿ ಹರೀಶ್ ಶೆಟ್ಟಿ ಪಡುಕೂಡೂರು ಮತ್ತು ಹಿಂದೂ ಹೆಲ್ಪ್ ಲೈನ್ ಜನಸೇವಾ ಟ್ರಸ್ಟ್ ಮುನಿಯಾಲು ಇದರ ಅಧ್ಯಕ್ಷ ರಾಜೇಶ್ ಶೆಟ್ಟಿ ಮುನಿಯಾಲು ಉಪಸ್ಥಿತರಿದ್ದರು.
ಮುಟ್ಲುಪಾಡಿ ಸುಹಾಸ್ ಶೆಟ್ಟಿ, ಸ್ವಾಗತಿಸಿ ರಾಮಚಂದ್ರ ನಾಯಕ್ ವಂದಿಸಿದರು. 150 ಮಂದಿ ಸ್ವಯಂ ಪ್ರೇರಿತ ರಕ್ತದಾನ ಮಾಡಿದರು ಹಾಗೂ 130 ಜನರು ಉಚಿತ ಹೃದಯ ತಪಾಸಣೆಯ ಪ್ರಯೋಜನವನ್ನು ಪಡೆದುಕೊಂಡರು.





























































































































error: Content is protected !!
Scroll to Top