ಆಪ್‌, ಕಾಂಗ್ರೆಸ್‌ ಅಹಂಕಾರಕ್ಕೆ ಮತದಾರರಿಂದ ಪಾಠ: ಸುನಿಲ್‌ ಕುಮಾರ್‌

ಕಾರ್ಕಳ : ವಿಭಜಕ ಮನಸ್ಥಿತಿಯ ಆಪ್‌ ಹಾಗೂ ಹಿಂದು ವಿರೋಧಿ ಕಾಂಗ್ರೆಸ್‌ನ ಅಹಂಕಾರಕ್ಕೆ ಬೇಸತ್ತ ದಿಲ್ಲಿಯ ಜನರು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಬಾರಿಸುವಂತೆ ಮಾಡಿದ್ದಾರೆ ಎಂದು ಮಾಜಿ ಸಚಿವ ಕಾರ್ಕಳದ ಶಾಸಕ ವಿ.ಸುನೀಲ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಆಪ್ ಸರ್ಕಾರ ರಾಷ್ಟ್ರ ರಾಜಧಾನಿಯಲ್ಲಿ ನೆಲೆ ಕಳೆದುಕೊಂಡಿದೆ. ಸತತ ಮೂರನೇ ಬಾರಿಗೆ ಕಾಂಗ್ರೆಸ್ ಶೂನ್ಯ ಸಂಪಾದಿಸಿದೆ. ಪ್ರಧಾನಿ‌ ನರೇಂದ್ರ ಮೋದಿ ನೇತೃತ್ವದ ಡಬಲ್ ಎಂಜಿನ್ ಸರ್ಕಾರ ದಿಲ್ಲಿಯನ್ನು ಆಳಲಿದೆ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ದೃಢ ನಾಯಕತ್ವದಲ್ಲಿ ಈಗ ದಿಲ್ಲಿ ಗದ್ದುಗೆ ಏರಿದ್ದೇವೆ. ಈ ವಿಜಯಯಾತ್ರೆ ದೇಶಾದ್ಯಂತ ಮುಂದುವರಿಯುತ್ತದೆ. ಕೆಲವೇ ವರ್ಷದಲ್ಲಿ ಕರ್ನಾಟಕದಲ್ಲಿ ಮತ್ತೆ ಕಮಲ ಅರಳಲಿದೆ. ದಿಲ್ಲಿ ಗೆಲುವಿಗೆ ಕಾರಣರಾದ ಪ್ರತಿಯೊಬ್ಬರಿಗೂ ಅಭಿನಂದನೆಗಳು ಎಂದು ಹೇಳಿದ್ದಾರೆ.





























































































































error: Content is protected !!
Scroll to Top