36ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ

ಕಾರ್ಕಳ : ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ ಉಡುಪಿ ಇವರ ವತಿಯಿಂದ ಫೆ. 6ರಂದು ಕಾರ್ಕಳ ಪ್ರವಾಸಿ ಮಂದಿರದ ವಠಾರದಲ್ಲಿ 36ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಜರುಗಿತು. ಪ್ರಾದೇಶಿಕ ಸಾರಿಗೆ ಕಚೇರಿಯ ಹಿರಿಯ ಮೋಟಾರು ವಾಹನ ನಿರೀಕ್ಷಕ ಸಂತೋಷ್ ಶೆಟ್ಟಿ ಮಾತನಾಡಿ, ರಸ್ತೆ ಸುರಕ್ಷೆ ಹಾಗೂ ವಾಹನ ಚಾಲಕರು ಪಾಲಿಸಬೇಕಾದ ನಿಯಮಗಳನ್ನು ವಿವರಿಸಿದರು. ಶ್ರೀ ಮಹಾವೀರ ಡ್ರೈವಿಂಗ್ ಸ್ಕೂಲ್‌ ಪ್ರಾಂಶುಪಾಲ ನೇಮಿರಾಜ ಆರಿಗ, ವಿವೇಕ್ ಡ್ರೈವಿಂಗ್ ಸ್ಕೂಲ್ ಪ್ರಾಂಶುಪಾಲ ಗೋಪಾಲ ಪೈ, ಗುಡ್ ಲಕ್ ಡ್ರೈವಿಂಗ್ ಸ್ಕೂಲ್ ಪ್ರಾಂಶುಪಾಲ ಶಿವರಾಮ ಹೆಗ್ಡೆ, ಆಳ್ವಾಸ್ ಕಾಲೇಜು ಅಧ್ಯಾಪಕ ಮಂಜುನಾಥ್‌, ವಾಹನ ಚಾಲಕರು ಹಾಗೂ ಮಾಲಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಅಂಬಾ ಡ್ರೈವಿಂಗ್ ಸ್ಕೂಲ್ ಪ್ರಾಂಶುಪಾಲ ಅಂಬಾಪ್ರಸಾದ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.





























































































































error: Content is protected !!
Scroll to Top