ಕಾರ್ಕಳ : ಎಣ್ಣೆಹೊಳೆ ಹಂಚಿಕಟ್ಟೆ ಶ್ರೀ ಮಹಾಮ್ಮಾಯಿ ದೇವಸ್ಥಾನದಲ್ಲಿ 32ನೇ ವರ್ಷದ ಭಜನಾ ಮಂಗಲೋತ್ಸವ ಮತ್ತು ಪ್ರತಿಷ್ಠಾ ವರ್ಧಂತ್ಯುತ್ಸವ ಜ. 26 ರಿಂದ 28ರವರೆಗೆ ಜರುಗಲಿದೆ.
ಜ. 26 ರಂದು ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ 32ನೇ ಭಜನಾ ಮಂಗಲೋತ್ಸವ ನಡೆಯಲಿದೆ.
ಜ. 27ರಂದು ಬೆಳಿಗ್ಗೆ 10 ಗಂಟೆಗೆ ಕದಳಿ ಯಾಗ, ಮಧ್ಯಾಹ್ನ ಮಹಾಪೂಜೆ ಮತ್ತು ಅನ್ನ ಸಂತರ್ಪಣೆ, ಸಂಜೆ 5.30ರಿಂದ ಮಕ್ಕಳಿಂದ ವಿವಿಧ ವಿನೋದಾವಳಿಗಳು ರಾತ್ರಿ 7.30ರಿಂದ ಹೂವಿನ ಪೂಜೆ ಹಾಗೂ ಅನ್ನ ಸಂತರ್ಪಣೆ, 9 ಗಂಟೆಯಿಂದ ಲಕುಮಿ ತಂಡದ ಶ್ರೀ ಲಲಿತೆ ಕಲಾವಿದರಿಂದ ಗರುಡ ಪಂಚಮಿ ಎಂಬ ತುಳು ನಾಟಕ ಪ್ರದರ್ಶನಗೊಳ್ಳಲಿದೆ.
ಜ. 28ರಂದು ಬೆಳಿಗ್ಗೆ 9.30ರಿಂದ ನವಕ ಪ್ರಧಾನ, ಕಲಾಶಾಭಿಷೇಕ, 10ಗಂಟೆಯಿಂದ ಆಶ್ಲೇಷಾ ಬಲಿ, ನಾಗದರ್ಶನ, ಮಧ್ಯಾಹ್ನ ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ 12.30ರಿಂದ ಶ್ರೀ ಮಹಾಮ್ಮಾಯಿ ಯಕ್ಷಗಾನ ಕಲಾ ಮಂಡಳಿ ಶ್ರೀ ಕ್ಷೇತ್ರ ಹಂಚಿಕಟ್ಟೆ ಎಣ್ಣೆಹೊಳೆ ಇವರಿಂದ ಶ್ರೀರಾಮ ಸೇನೆ ಯಕ್ಷಗಾನ, ಸಂಜೆ 6 ಗಂಟೆಯಿಂದ ಭಜನೆ, ಮಹಾಪೂಜೆ, ಗೋಂದ್ಲು ಸೇವೆ , ದೇವಿದರ್ಶನ, ಮಾರಿ, ರಾತ್ರಿ 10 ಗಂಟೆಯಿಂದ ಶ್ರೀ ನಂದಿಕೇಶ್ವರ ಪ್ರಸಾದಿತ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಮೆಕ್ಕೆಕಟ್ಟು ಶಿರಿಯಾರ ಇವರಿಂದ ಪ್ರಶ್ನಾರ್ಥಕ ಎಂಬ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.






























































