ಕಾರ್ಕಳ : ಬಂಟ್ಸ್ ಕೋ ಆಪರೇಟಿವ್ ಸೊಸೈಟಿ ಮೂರು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿ ನಾಲ್ಕನೇ ವರ್ಷಕ್ಕೆ ಪದಾರ್ಪಣೆ ಮಾಡಿದೆ. 2022, ಜ. 26ರಂದು ಪ್ರಾರಂಭವಾದ ಸಂಸ್ಥೆ ಯಶಸ್ಸಿನ ಪಥದಲ್ಲಿ ಮುನ್ನಡೆಯುತ್ತಿದೆ. ಸೊಸೈಟಿಯ ಠೇವಣಿ ಮೊತ್ತ 18.01 ಕೋಟಿ ರೂ. ಆಗಿದ್ದು, 17.25 ಕೋಟಿ ರೂ ಸಾಲ ನೀದೆ. 35.26 ಕೋಟಿ ರೂಪಾಯಿ ವ್ಯವಹಾರವನ್ನು ಮಾಡಿದೆ.
3ನೇ ವರ್ಷದ ಯಶಸ್ಸಿನ ಸಂಧರ್ಭದಲ್ಲಿ ಸಂಘದ ಅಧ್ಯಕ್ಷ ಮುನಿಯಾಲು ಉದಯ ಶೆಟ್ಟಿಯವರು ಎಲ್ಲ ಸದಸ್ಯರಿಗೆ, ಠೇವಣಿದಾರರಿಗೆ ಹಾಗೂ
ಪ್ರೀತಿಯ ಗ್ರಾಹಕರಿಗೆ ಕೃತಜ್ಞತೆ ಅರ್ಪಿಸಿ ಎಲ್ಲರ ಪ್ರೀತಿ ಕಾಳಜಿ ಹಾಗೂ ಪ್ರೋತ್ಸಾಹ ಸದಾಕಾಲವೂ ಹೀಗೆ ಸಂಸ್ಥೆಯ ಮೇಲಿರಲಿ ಎಂದು ಆಶಿಸಿದ್ದಾರೆ.
ಯಶಸ್ವಿ ಮೂರು ವರ್ಷ ಪೂರೈಸಿದ ಬಂಟ್ಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ






























































