ಸಮುದಾಯದ ಕಾರ್ಯವೈಖರಿ ಶ್ಲಾಘನೀಯ – ಮಾಳ ಹರ್ಷೇಂದ್ರ ಜೈನ್

ಬೆಂಗಳೂರು : ಅತಿಶಯ ಕ್ಷೇತ್ರ ಕಂಬದಹಳ್ಳಿ ಜೈನ ಮಠದ ಪರಿಸರದಲ್ಲಿ ಹತ್ತು ದಿನಗಳ ವಾರ್ಷಿಕ ಜಾತ್ರಾ ಮಹೋತ್ಸವ ಇತ್ತೀಚೆಗೆ ನೆರವೇರಿತು.
ಜ. 19ರಂದು ನಡೆದದ ಧಾರ್ಮಿಕ ಸಭೆಯಲ್ಲಿ ಪೂಜ್ಯ ಶ್ರೀ ಬಾನು ಕೀರ್ತಿ ಸ್ವಾಮೀಜಿ, ಮಠದ ಕಿರಿಯ ಆನಂದ ಕೀರ್ತಿ ಸ್ವಾಮೀಜಿ ಹಾಗೂ ಶ್ರೀ ಕ್ಷೇತ್ರ ಶ್ರವಣಬೆಳಗೊಳದ ಶ್ರೀ ಅಭಿನಯ ಚಾರು ಕೀರ್ತಿ ಸ್ವಾಮೀಜಿ ದಿವ್ಯ ಉಪಸ್ಥಿತಿಯಲ್ಲಿದ್ದರು.
ಕಾರ್ಯಕ್ರಮದಲ್ಲಿ ಧಾರ್ಮಿಕ ಚಿಂತಕ, ಸಾಹಿತಿ ವೀರೇಂದ್ರ ಬೇಗೂರ್ ಮಾತನಾಡಿ, ಶ್ರೀ ಕ್ಷೇತ್ರ ಕಂಬದಹಲ್ಲಿಯ ಶಾಸನ ಮತ್ತು ಗಂಗರ ಆಳ್ವಿಕೆಯಲ್ಲಿ ಕಂಬದಳ್ಳಿ ಕ್ಷೇತ್ರದ ಮಠದ ಇತಿಹಾಸವನ್ನು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹರ್ಷೇಂದ್ರ ಜೈನ ಮಾತಾಡುತ್ತಾ, ಹಿರಿಯ ಬಾನು ಕೀರ್ತಿ ಸ್ವಾಮೀಜಿಯವರ 30 ವರ್ಷಗಳ ಅವಿರತ ಶ್ರಮ ಮತ್ತು ಸೇವೆಯ ಮುಖಾಂತರ ಈ ದಿನ ಕಂಬದಹಳ್ಳಿ ಮಠದಲ್ಲಿ ಜೈನ ಸಮಾಜದ ಸುಮಾರು 185ಕ್ಕೂ ಮಿಗಿಲಾದ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಆಶ್ರಯ, ವಿದ್ಯಾಭ್ಯಾಸದ ಜೊತೆಯಲ್ಲಿ ಧಾರ್ಮಿಕತೆಯನ್ನು ಮೈಗೂಡಿಸಿಕೊಳ್ಳುವಂತೆ ಸತತ ಪ್ರಯತ್ನ ಮಾಡಿ ಸಮಾಜಕ್ಕೆ ಮಾದರಿಯ ಭಟ್ಟಾರಕರು ಎಂದು ಪ್ರಶಾಂಸೆಗೆ ಪಾತ್ರರಾಗಿದ್ದಾರೆ ಎಂದ ಅವರು ಆರ್ಥಿಕವಾಗಿ ಹಿಂದುಳಿದ ಮಠದಲ್ಲಿರುವ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಪೂರಕವಾಗಿ ಬೆಂಗಳೂರಿನ ಬಾನಸವಾಡಿಯ ದಿವಂಗತ ಪದ್ಮರಾಜ್ ಅವರ ಹೆಸರಿನಲ್ಲಿ ಮಠಕ್ಕೆ ಒಂದು ಕೋಟಿ ಮೊತ್ತವನ್ನು ಕೊಡಿಸುವಲ್ಲಿ ಮಹತ್ ಕಾರ್ಯದಲ್ಲಿ ಭಾಗಿಯಾದ ಬೆಂಗಳೂರಿನ ಎಸ್ಆರ್ ಎಫ್ ಸೆಕ್ಯೂರಿಟಿಯ ಮ್ಯಾನೇಜಿಂಗ್ ಡೈರೆಕ್ಟರ್ ಶೀತಲ್ ಕುಮಾರ್ ಅವರ ಶ್ರಮ ಹಾಗೆ ಮೈಸೂರಿನ ಚಾರಿತ್ಯ, ಬೆಳ್ಳೂರಿನ ಪಾಪಣ್ಣ ಮತ್ತು ಬಿಎಸ್ಎಂ ಜೈನ್ ಅಸೋಸಿಯೇಷನ್ ಎಲ್ಲಾ ಪದಾಧಿಕಾರಿಗಳ ಸಮಯೋಚಿತ ಸೇವೆಯನ್ನು ಅಭಿನಂದಿಸಿದರು.

ವೇದಿಕೆಯಲ್ಲಿ ಹಿರಿಯ ವಕೀಲರು ಹಾಗೂ ಬಿಎಸ್ಎಂ ಜೈನ್ ಅಸೋಸಿಯೇಷನ್ ಅಧ್ಯಕ್ಷ ಎನ್. ಯಶೋಧರ ಅಧಿಕಾರಿ, ಲಯನ್ಸ್ ಕ್ಲಬ್ಬಿನ ಅಧ್ಯಕ್ಷ ಪಣಿರಾಜ್ ಜೈನ್, ಮಂಡ್ಯ ಜೈನ್ ಸಮಾಜದ ಶಾಂತಿಪ್ರಸಾದ್, ಹಿರಿಯರಾದ ಚಂದ್ರಕೀರ್ತಿ ಜೈನ್, ಮಠದ ಆಡಳಿತ ಮಂಡಳಿಯ ಮುಖಂಡ ಬೆಳ್ಳೂರಿನ ಪಾಪಣ್ಣ, ಜೈನ ಸಮಾಜದ ಮುಖಂಡರು, ಮತ್ತು ಶ್ರಾವಕ ಶ್ರಾವಕಿಯರು ಉಪಸ್ಥಿತರಿದ್ದರು.





























































































































error: Content is protected !!
Scroll to Top