ಬೈಕ್‌ಗೆ ಕಾರು ಡಿಕ್ಕಿ – ಸವಾರ ಮೃತ್ಯು

ಹೆಬ್ರಿ : ಬೈಕ್‌ಗೆ ಕಾರು ಡಿಕ್ಕಿಯಾಗಿ ಸವಾರ ಮೃತಪಟ್ಟ ಘಟನೆ ಶಿವಪುರದಲ್ಲಿ ಸಂಭವಿಸಿದೆ. ಮೂರ್ಸಾಲು ನಿವಾಸಿ ರಾಹುಲ್‌ (25) ಮೃತ ದುರ್ದೈವಿ. ಜ.4ರಂದು ರಾತ್ರಿ 11:30 ಗಂಟೆಗೆ ರಾಹುಲ್‌ ಬೈಕ್‌ನಲ್ಲಿ ಹೆಬ್ರಿ ಕಡೆಗೆ ಸಾಗುತ್ತಿರುವಾಗ ಎದುರು ದಿಕ್ಕಿನಿಂದ ಅಂದರೆ ಹೆಬ್ರಿ ಕಡೆಯಿಂದ ಶಿವಪುರ ಕಡೆಗೆ ಅರುಣ್‌ ಎಂಬಾತ ಚಲಾಯಿಸಿಕೊಂಡು ಬರುತ್ತಿದ್ದ ಕೆಎ-27 ಬಿ-9764 ನೇ ಸ್ವಿಪ್ಟ್‌ ಕಾರು ಡಿಕ್ಕಿಯಾಗಿದೆ. ಪರಿಣಾಮವಾಗಿ ರಾಹುಲ್‌ ಬೈಕ್‌ ಸಮೇತ ರಸ್ತೆಗೆ ಬಿದ್ದು ಗಾಯಗೊಂಡಿರುತ್ತಾರೆ. ಹಿಂದಿನಿಂದ ಕಾರಿನಲ್ಲಿ ಬರುತ್ತಿದ್ದ ಶಿವಪುರದ ಸುರೇಶ್‌ ಅವರು ಬೈಕ್‌ ಸವಾರನನ್ನು ಉಪಚರಿಸಿದಾಗ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ತಕ್ಷಣವೇ ಗಾಯಾಳುವನ್ನು ಚಿಕಿತ್ಸೆಗಾಗಿ ಹೆಬ್ರಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲು ಮಾಡಿರುತ್ತಾರೆ. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ರಾಹುಲ್‌ ಜ. 5ರಂದು ಬೆಳಿಗ್ಗೆ 7:13ಕ್ಕೆ ಮೃತಪಟ್ಟಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.





























































































































error: Content is protected !!
Scroll to Top