ಬಾವಿಗೆ ಬಿದ್ದ ವೃದ್ಧ ದಂಪತಿಯನ್ನು ರಕ್ಷಿಸಿದ ಅಗ್ನಿಶಾಮಕ ಪಡೆ

ಕಾರ್ಕಳ : ಕಲ್ಲೊಟ್ಟೆ ಪೆರ್ವಾಜೆ ರಸ್ತೆಯ ಮನೆಯೊಂದರ ಬಾವಿಯಲ್ಲಿ ಸಿಲುಕಿದ್ದ ವೃದ್ಧ ದಂಪತಿಯನ್ನು ಕಾರ್ಕಳ ಅಗ್ನಿಶಾಮಕ ಪಡೆಯವರು ಪಾರು ಮಾಡಿದ್ದಾರೆ. ಸುಮಾರು 60 ಅಡಿ ಆಳವಿರುವ ಹಾಗೂ 20 ಅಡಿಯಷ್ಟು ನೀರಿರುವ ಬಾವಿಗೆ ಇಂದು ಬೆಳಗ್ಗೆ ಅನಿತಾ ಮಲ್ಯ (57) ಎಂಬ ಮಹಿಳೆ ಆಕಸ್ಮಿಕ ವಾಗಿ ಬಿದ್ದಿದ್ದು, ಅವರನ್ನು ರಕ್ಷಿಸುವ ಸಲುವಾಗಿ ಗಂಡ ಅಣ್ಣಪ್ಪ ಮಲ್ಯ (59) ಬಾವಿಗೆ ಇಳಿದಿದ್ದರು. ಆದರೆ ಇಬ್ಬರೂ ಮೇಲೆ ಬರಲು ಸಾಧ್ಯವಾಗದೆ ಸಿಲುಕಿಕೊಂಡಿದ್ದರು. ಇಬ್ಬರೂ ನೀರಿನ ಪೈಪ್‌ ಹಿಡಿದುಕೊಂಡು ನೇತಾಡಿಕೊಂಡು ನೆರವಿಗಾಗಿ ಮೊರೆಯಿಡುತ್ತಿದ್ದರು. ಕಾರ್ಕಳ ಅಗ್ನಿ ಶಾಮಕ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿ ತಕ್ಷಣ ಕಾರ್ಯಾಚರಣೆ ನಡೆಸಿ ಗಂಡ ಹೆಂಡತಿಯನ್ನು ಮೇಲಕ್ಕೆ ಎತ್ತಿ ಪ್ರಾಣ ರಕ್ಷಣೆ ಮಾಡಿದ್ದಾರೆ.
ಈ ಕಾರ್ಯಚರಣೆಯಲ್ಲಿ ಅಗ್ನಿಶಾಮಕ ಅಧಿಕಾರಿ ಆಲ್ಬರ್ಟ್ ಮೋನಿಸ್, ಸಹಾಯಕ ಅಗ್ನಿಶಾಮಕ ಅಧಿಕಾರಿ ಚಂದ್ರಶೇಖರ್, ಸಿಬ್ಬಂದಿ ಹರಿಪ್ರಸಾದ್ ಶೆಟ್ಟಿಗಾರ್, ಸಂಜಯ್, ಹಸನ್ ಮುಲ್ತಾನಿ, ರವಿಚಂದ್ರ ಕೊರವರ ಭಾಗವಹಿಸಿದ್ದರು.









































































































error: Content is protected !!
Scroll to Top