ಜ. 6 – 12 : ಪಡುಕುತ್ಯಾರು ಆನೆಗುಂದಿ ಮಠದಲ್ಲಿ ಕೋಟಿ ಕುಂಕುಮಾರ್ಚನೆ

ಲೋಕಕಲ್ಯಾಣದ ಸಂಕಲ್ಪದೊಂದಿಗೆ ಬೃಹತ್‌ ಧಾರ್ಮಿಕ ಕಾರ್ಯಕ್ರಮ

ಪಡುಕುತ್ಯಾರು : ಪಡುಕುತ್ಯಾರಿನಲ್ಲಿರುವ ಕಟಪಾಡಿ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದಲ್ಲಿ ಜ.6ರಿಂದ 12ರ ತನಕ ಕೋಟಿ ಕುಂಕುಮಾರ್ಚನೆ ಶ್ರೀ ಸರಸ್ವತೀ ಮಾತೃಮಂಡಳಿ, ಆನೆಗುಂದಿ ಪ್ರತಿಷ್ಠಾನದ ವ್ಯಾಪ್ತಿಯ ದೇವಸ್ಥಾನಗಳು ಹಾಗೂ ಸ್ಥಳೀಯ ಪಂಚಾಯತ್‌ಗಳ ಹಿಂದೂ ಸಮಾಜ ಬಾಂಧವರ ನೇತೃತ್ವದಲ್ಲಿ ನಡೆಯಲಿದೆ.

ಮಹಾಸಂಸ್ಥಾನದ ವಿವಿಧ ಯೋಜನೆಗಳ ಸಾಕಾರ ಮತ್ತು ಲೋಕಕಲ್ಯಾಣದ ಸಂಕಲ್ಪದೊಂದಿಗೆ ಕೇಪಳ ಪುಷ್ಪದೊಂದಿಗೆ ಶ್ರೀ ಸರಸ್ವತೀ ಯಾಗಶಾಲೆಯಲ್ಲಿ ನಡೆಯುವ ಕೋಟಿ ಕುಂಕುಮಾರ್ಚನೆಯ ವೇಳೆ ವಿವಿಧ ಹೋಮ-ಯಜ್ಞಗಳನ್ನುಆಯೋಜಿಸಲಾಗಿದೆ.

ಜ.6ರಂದು ಅಷ್ಟಚಾತ್ವಾರಿಂಶತ್ ನಾರಿಕೇಳ ಗಣಯಾಗ, ಶ್ರೀಗುರುಭಕ್ತಿ ಕುಸುಮಾಂಜಲಿ ಸ್ತೋತ್ರ ಪುಸ್ತಕ ಬಿಡುಗಡೆ, ಮಹಾಸಂಸ್ಥಾನದ ಯುಟ್ಯೂಬ್‌ ಚಾನೆಲ್‌ ಆರಂಭ, ಜ.7ರಂದು ರುದ್ರಯಾಗ ಮಹಾಮೃತ್ಯುಂಜಯಯಾಗ, ಜ.8ರಂದು ವಿಷ್ಣುಹವನ, ಧನ್ವಂತರಿ ಹೋಮ, ಜ.9ರಂದು ಆದಿತ್ಯ ಹೃದಯ ಹೋಮ, ಸೌರ ಸೂಕ್ತ ಹೋಮ, ಜ.10ರಂದು ಶ್ರೀ ಸರಸ್ವತೀ ಹೋಮ, ಶ್ರೀ ದುರ್ಗಾ ಹೋಮ, ಜ.11ರಂದು ವಿಶ್ವಕರ್ಮ ಹೋಮ, ನವಗ್ರಹ ಹೋಮ, ಜ.12ರಂದು ದಶ ಸಹಸ್ರ ಕದಳಿ ಶ್ರೀಲಲಿತಾ ಸಹಸ್ರನಾಮ ಹೋಮಗಳು, ಶ್ರೀ ಸೂಕ್ತ ಹೋಮ ಬಳಿಕ ಅರ್ಚನಾಸೇವೆ ನಡೆದು ಕೋಟಿ ಕುಂಕುಮಾರ್ಚನೆಯ ಸಮರ್ಪಣೆಯ ನಂತರ ಧಾರ್ಮಿಕ ಸಭೆ ನಡೆಯಲಿದೆ.

ದಿನಂಪ್ರತಿ ನಡೆಯುವ ಕಾರ್ಯಕ್ರಮಗಳ ವಿವರ ಇಂತಿದೆ
ಬೆಳಗ್ಗೆ 6ಕ್ಕೆ ಪ್ರಾರ್ಥನೆ, ಗುರು ಗಣಪತಿ ಪೂಜೆ, ಪುಣ್ಯಾಹ ವಾಚನ, 6.30ಕ್ಕೆ ಯಜ್ಞಗಳ ಪ್ರಾರಂಭ, 8.30ಕ್ಕೆ ಯಜ್ಞಗಳ ಪೂರ್ಣಾಹುತಿ, 9.ರಿಂದ ಅರ್ಚನೆ, ಮಧ್ಯಾಹ್ನ 12.15ಕ್ಕೆ ಮಹಾಪೂಜೆ-ತೀರ್ಥ ಪ್ರಸಾದ, 1ಕ್ಕೆ ಭೋಜನ, ವಿವಿಧ ತಂಡಗಳಿಂದ ಭಜನಾ ಸಂಕೀರ್ತನಾ ಸೇವೆ, ಅಪರಾಹ್ನ 2.30ರಿಂದ 5 ಅರ್ಚನೆ ಮುಂದುವರಿಕೆ, ಸಂಜೆ 5.15ರಿಂದ ಮಹಾಪೂಜೆ, ಅಷ್ಟಾವಧಾನ, ತೀರ್ಥ ಪ್ರಸಾದ ವಿತರಣೆ, ಉಪಾಹಾರ ನಡೆಯಲಿದೆ.

ಕೋಟಿ ಕುಂಕುಮಾರ್ಚನೆಯ ಆಯೋಜನೆಯ ಬಗ್ಗೆ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ಆನೆಗುಂದಿ ಪ್ರತಿಷ್ಠಾನದ ಅಧ್ಯಕ್ಷ ವಿ. ಶ್ರೀಧರ ಆಚಾರ್ಯ ವಡೇರಹೋಬಳಿ ವಹಿಸಿದ್ದರು. ಕಾರ್ಯಕ್ರಮದ ಯಶಸ್ವಿಗೆ ವಿಸ್ತೃತವಾಗಿ ಚರ್ಚಿಸಿ ತೀರ್ಮಾನಗಳನ್ನು ಕೈಗೊಳ್ಳಲಾಯಿತು.

ಮಹಾಸಂಸ್ಥಾನದ ಶ್ರೀ ಸರಸ್ವತೀ ಮಾತೃಮಂಡಳಿಯ ಅಧ್ಯಕ್ಷೆ ಸಂಧ್ಯಾಲಕ್ಷ್ಮಣ ಆಚಾರ್ಯ ಉಡುಪಿ, ಬಿ. ಸೂರ್ಯಕುಮಾರ್ ಹಳೆಯಂಗಡಿ, ಅರವಿಂದ ವೈ. ಆಚಾರ್ಯ ಬೆಳುವಾಯಿ, ದಿನೇಶ್‌ ಆಚಾರ್ಯ ಪಡುಬಿದ್ರಿ, ನ್ಯಾಯವಾದಿ ಕೆ. ಪ್ರಭಾಕರ ಆಚಾರ್ಯ ಕೋಟೆಕಾರು, ಕೆ.ಎಂ ಗಂಗಾಧರ ಆಚಾರ್ಯ ಕೊಂಡೆವೂರು, ಜಿ.ಟಿ ಆಚಾರ್ಯ ಮುಂಬಯಿ, ಶ್ರೀಧರ ಜೆ.ಆಚಾರ್ಯ ಕಟಪಾಡಿ, ಯಜ್ಞೇಶ್ವರ ಆಚಾರ್ಯ ಕುತ್ಯಾರು, ಎ. ಗಣೇಶ ಆಚಾರ್ಯ ಕೋಟ, ಗುರುರಾಜ ಕೆ.ಜೆ ಆಚಾರ್ಯ ಮಂಗಳೂರು, ಗಣೇಶ್‌ ಆಚಾರ್ಯ ಕೆಮ್ಮಣ್ಣು, ಕೇಶವ ಶರ್ಮಾ ಇರುವೈಲು, ಮನೋಜ್‌ ಶರ್ಮಾ ಕಟಪಾಡಿ, ಲೋಲಾಕ್ಷ ಶರ್ಮಾ ಕಟಪಾಡಿ, ಉಷಾ ಜಿ.ಟಿ ಆಚಾರ್ಯ, ಆಶಾ ಎನ್‌ ಆಚಾರ್ಯ, ದೀಪಾ ಸುರೇಶ್‌ ಆಚಾರ್ಯ ಕಟಪಾಡಿ, ಕವಿತಾ ಹರೀಶ್‌ ಆಚಾರ್ಯ ಕಾರ್ಕಳ, ಸವಿತಾ ಗಂಗಾಧರ ಆಚಾರ್ಯ ಕೊಡವೂರು, ಪುಷ್ಪಲತಾ ಲೋಕೇಶ್‌ ಆಚಾರ್ಯ ಕಂಬಾರು, ಸುಲೋಚನ, ಕೆ. ಹೇಮಲತಾ, ಶಾಲಿನಿ, ವಿನೋದಿನಿ, ಉಷಾ ಎಸ್‌. ಆಚಾರ್ಯ ಕಾಡಬೆಟ್ಟು, ದೀಪಾ ಪ್ರಶಾಂತ್‌ ಕಟಪಾಡಿ, ಶಾಲಿನಿ ಶಿವರಾಮ, ಶಾಲಿನಿ ರತ್ನಾಕರ ಪಡುಕುತ್ಯಾರು ಭಾಗವಹಿಸಿದ್ದರು. ಆನೆಗುಂದಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಲೋಕೇಶ್‌ ಎಂ.ಬಿ ಆಚಾರ್‌ ಕಂಬಾರ್‌ ಸ್ವಾಗತಿಸಿ, ಮಾತೃಮಂಡಳಿ ಪ್ರಧಾನ ಕಾರ್ಯದರ್ಶಿ ರಮಾ ನವೀನ್‌ ಕಾರ್ಕಳ ವಂದಿಸಿದರು.























































error: Content is protected !!
Scroll to Top