ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸಭೆ – 32 ಅರ್ಜಿ ಮಂಜೂರಾತಿ

ಕಾರ್ಕಳ : ಕಾರ್ಕಳ ತಾಲೂಕಿನ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸಭೆ ಜ. 3ರಂದು ಶಾಸಕ ಸುನಿಲ್‌ ಕುಮಾರ್‌ ಅವರ ಅಧ್ಯಕ್ಷತೆಯಲ್ಲಿ ತಾಲೂಕು ಕಚೇರಿ ಸಭಾಂಗಣದಲ್ಲಿ ಜರುಗಿತು.

ಸಭೆಯಲ್ಲಿ ಒಟ್ಟು 41 ಕಡತಗಳನ್ನು ಸಮಿತಿಯ ಮುಂದೆ ಮಂಡಿಸಲಾಗಿದ್ದು, ಇದರಲ್ಲಿ 7 ಕಡತಗಳನ್ನು ಮರು ಸರ್ವೇಗೆ ಹಿಂತಿರುಗಿಸಲಾಯಿತು. 2 ಅರ್ಜಿದಾರರು ಗೈರು ಹಾಜರಾಗಿದ್ದು, 32 ಕಡತಗಳನ್ನು ಮಂಜೂರಾತಿಗಾಗಿ ಶಿಫಾರಸ್ಸು ಮಾಡಲಾಯಿತು.
ಸುಮಾರು ವರ್ಷಗಳಿಂದ ಮಂಜೂರಾತಿಗೆ ಬಾಕಿ ಇರುವ ಅರ್ಹ ಅಕ್ರಮ ಸಕ್ರಮ ಅರ್ಜಿಗಳನ್ನು ಆದಷ್ಟು ಬೇಗ ತನಿಖೆ ನಡೆಸಿ ಮಂಜೂರಾತಿಗೆ ಕ್ರಮವಹಿಸಲು ಶಾಸಕರು ಸೂಚಿಸಿದರು.

ಈ ಸಂದರ್ಭ ಅಕ್ರಮ ಸಕ್ರಮ ಸಮಿತಿಯ ಕಾರ್ಯದರ್ಶಿ, ತಹಶೀಲ್ದಾರ್‌ ಪ್ರದೀಪ್‌ ಆರ್‌., ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ನವೀನ್‌ ದೇವಾಡಿಗ, ರಮೇಶ್‌ ಬಜಕಳ, ಸುನಿತಾ ಶೆಟ್ಟಿ, ಉಪ ತಹಶೀಲ್ದಾರ್‌ ಮಂಜುನಾಥ್‌ ನಾಯಕ್‌, ವಿಷಯ ನಿರ್ವಾಹಕರಾದ ತಾರೇಶ್‌, ಪೂಜಾ, ಹಾಗೂ ಕಾರ್ಕಳ ಮತ್ತು ಅಜೆಕಾರು ಹೋಬಳಿ ಕಂದಾಯ ನಿರೀಕ್ಷಕರು ಹಾಗೂ ತಾಲೂಕಿನ ಗ್ರಾಮ ಆಡಳಿತ ಅಧಿಕಾರಿಗಳು, ತಾಂತ್ರಿಕ ಸಮಾಲೋಚಕರು ಉಪಸ್ಥಿತರಿದ್ದರು.























































error: Content is protected !!
Scroll to Top