ಕಾರ್ಕಳ : ಕಾರ್ಕಳದ ಜೋಡುರಸ್ತೆಯಲ್ಲಿರುವ ಕ್ರಿಯೇಟಿವ್ ಪುಸ್ತಕಮನೆಗೆ ಚಂದನವಾಹಿನಿಯ “ಥಟ್‌ಅಂತ ಹೇಳಿ” ಕಾರ್ಯಕ್ರಮದ ನಿರೂಪಕರಾಗಿರುವ, ನಡೆದಾಡುವ ಗ್ರಂಥಾಲಯ ಎಂದು ಖ್ಯಾತಿಯ ಡಾ. ನಾ ಸೋಮೇಶ್ವರ ಅವರು ಸಂಜೆ 4 ಗಂಟೆಗೆ ಮೂಡುಬಿದಿರೆ ಕ್ರಿಯೇಟಿವ್ ಪುಸ್ತಕ ಮನೆಗೆ ಹಾಗೂ ಸಂಜೆ 5 ಗಂಟೆಗೆ ಕಾರ್ಕಳದ ಜೋಡುರಸ್ತೆಯ ಕ್ರಿಯೇಟಿವ್ ಪುಸ್ತಕ ಮನೆಗೆ ಮತ್ತು ಕನ್ನಡದ ಪ್ರೇಮ ಕವಿ ಹಾಗು ತುಂಟ ಕವಿ ಎಂದೇ ಚಿರಪರಿಚಿತರಾಗಿರುವ ಬಿ. ಆರ್. ಲಕ್ಷ್ಮಣರಾವ್ ಅವರು ಸಂಜೆ 5.30ಕ್ಕೆ ಕಾರ್ಕಳದ ಜೋಡುರಸ್ತೆಯ ಪುಸ್ತಕ ಮನೆಗೆ ಆಗಮಿಸುತ್ತಿದ್ದಾರೆ. ಸಾಹಿತ್ಯಾಸಕ್ತರು ಈ ಸಂದರ್ಭ ಪಾಲ್ಗೊಳ್ಳಬಹುದು ಎಂದು ಸಂಸ್ಥೆ ಪ್ರಕಟನೆಯಲ್ಲಿ ತಿಳಿಸಿದೆ.
ಜ. 3 : ಕ್ರಿಯೇಟಿವ್ ಪುಸ್ತಕಮನೆಯ ‘ಪರಸ್ಪರ’ ದಲ್ಲಿ ಡಾ. ನಾ ಸೋಮೇಶ್ವರ ಮತ್ತು ಪ್ರೇಮಕವಿ ಬಿ. ಆರ್. ಲಕ್ಷ್ಮಣರಾವ್




















