ಡಿ. 21 : ಮುಕ್ತ ಹೊನಲು ಬೆಳಕಿನ ವಾಲಿಬಾಲ್‌ ಪಂದ್ಯಾಟ : ಸ್ವರಾಜ್ಯ ಟ್ರೋಫಿ -2024

ಕಾರ್ಕಳ : ಸ್ವರಾಜ್ಯ ಫ್ರೆಂಡ್ಸ್‌, ಸ್ವರಾಜ್ಯ (ರಿ.) ಇವರ ವತಿಯಿಂದ ಡಿ. 21ರಂದು ಕಾರ್ಕಳ ಸ್ವರಾಜ್ಯ ಮೈದಾನದಲ್ಲಿ ರಾತ್ರಿ 8.30ರಿಂದ ಮುಕ್ತ ಹೊನಲು ಬೆಳಕಿನ ವಾಲಿಬಾಲ್‌ ಪಂದ್ಯಾಟ ಸ್ವರಾಜ್ಯ ಟ್ರೋಫಿ -2024 ನಡೆಯಲಿದೆ. 1000 ರೂ. ಪ್ರವೇಶ ಶುಲ್ಕವಿರಲಿದ್ದು, ಪ್ರಥಮ, ದ್ವಿತೀಯ, ತೃತೀಯ ಹಾಗೂ ಚತುರ್ಥ ವಿಜೇತ ತಂಡಗಳಿಗೆ ಟ್ರೋಫಿಯೊಂದಿಗೆ ನಗದು ಬಹುಮಾನ ನೀಡಲಾಗುವುದು. ಇದರೊಂದಿಗೆ ಉತ್ತಮ ಹೊಡೆತಗಾರ, ಎತ್ತುಗಾರ ಹಾಗೂ ಸವ್ಯಸಾಚಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು.

ಸಂಜೆ 6 ಗಂಟೆಯಿಂದ 8.30ರವರೆಗೆ ಗ್ರಾಮೀಣ ಮಟ್ಟದ ಆಹ್ವಾನಿತ ತಂಡಗಳ ವಾಲಿಬಾಲ್‌ ಪಂದ್ಯಾಟ ನಡೆಯಲಿದೆ. ಪ್ರಥಮ ಹಾಗೂ ದ್ವಿತೀಯ ವಿಜೇತ ತಂಡಗಳಿಗೆ ನಗದು ಮತ್ತು ಟ್ರೋಫಿ ನೀಡಲಾಗುವುದು.
ಮುಕ್ತ ಹೊನಲು ಬೆಳಕಿನ ವಾಲಿಬಾಲ್‌ ಪಂದ್ಯಾಟದಲ್ಲಿ ಭಾಗವಹಿಸುವ ತಂಡಗಳು ತಮ್ಮ ಇರುವಿಕೆಯನ್ನು ರಾತ್ರಿ 8 ಗಂಟೆಯೊಳಗೆ ಹಾಜರುಪಡಿಸತಕ್ಕದ್ದು. ಪಂದ್ಯಾಟದ ಪಟ್ಟಿಯನ್ನು ರಾತ್ರಿ 8.30ಕ್ಕೆ ತಯಾರಿಸಿ ಪಂದ್ಯಾಟ ಆರಂಭಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ 9880515741, 8095487755, 9880915783 ಅಥವಾ 9916208176 ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದು ಆಯೋಜಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.











































































error: Content is protected !!
Scroll to Top