ಅಜೆಕಾರು : ಹೆಬ್ರಿಯ ಮಿಥುನ್ ಅಜೆಕಾರಿನ ಮಂಜುಶ್ರೀ ಕ್ರಶರ್ನಲ್ಲಿ ರೈಟರ್ ಆಗಿ ಕೆಲಸ ಮಾಡುತ್ತಿದ್ದು, ಡಿ. 18ರಂದು ಬೆಳಿಗ್ಗೆ 10:30ಕ್ಕೆ ಜಲ್ಲಿ ತುಂಬಿಸಲು ಕ್ರಶರ್ಗೆ ಬಂದಿದ್ದ ಟಿಪ್ಪರ್ ಲಾರಿಯನ್ನು ಅದರ ಚಾಲಕ ನಜರ್ ಅಹಮ್ಮದ್ ಹಿಂತೆಗೆಯುವ ವೇಳೆ ಎಡ ಭಾಗದಲ್ಲಿ ನಿಂತುಕೊಂಡಿದ್ದ ಮಿಥುನ್ ಅವರಿಗೆ ಡಿಕ್ಕಿಯಾಗಿರುತ್ತದೆ. ಪರಿಣಾಮವಾಗಿ ಅವರು ಕೆಳಗೆ ಬಿದ್ದಿದ್ದು, ಈ ವೇಳೆ ಲಾರಿಯ ಮುಂಭಾಗದ ಚಕ್ರ ಅವರ ಬಲ ಕಾಲಿನ ಮೇಲೆ ಚಲಿಸಿ ಗಾಯಗೊಂಡಿರುತ್ತಾರೆ. ಚಿಕಿತ್ಸೆಗಾಗಿ ಅವರನ್ನು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಜೆಕಾರು : ಕ್ರಶರ್ನಲ್ಲಿ ಟಿಪ್ಪರ್ ಲಾರಿ ಹಿಂತೆಗೆಯುವಾಗ ಡಿಕ್ಕಿ – ರೈಟರ್ ಆಸ್ಪತ್ರೆ ದಾಖಲು





































