ಪುದುಚೇರಿ, ತಮಿಳುನಾಡಿನ ವಿಳ್ಳುಪುರಂನಲ್ಲಿ ದಾಖಲೆಯ ವರ್ಷಧಾರೆ

ಕರ್ನಾಟಕದಲ್ಲೂ ಚಂಡಮಾರುತ ಎಫೆಕ್ಟ್ : ಹವಾಮಾನ ಇಲಾಖೆ ಎಚ್ಚರಿಕೆ

ಬೆಂಗಳೂರು: ನೆರೆಯ ತಮಿಳುನಾಡಿಗೆ ಫೆಂಗಲ್ ಚಂಡಮಾರುತ ಅಪ್ಪಳಿಸುತ್ತಿದ್ದಂತೆಯೇ ಕರ್ನಾಟಕದ ಹಲವೆಡೆ ಮಳೆ ಆರ್ಭಟ ಜೋರಾಗಿದ್ದು, ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ.

ನೈರುತ್ಯ ಬಂಗಾಳಕೊಲ್ಲಿಯಲ್ಲಿ ಕಾಣಿಸಿಕೊಂಡಿರುವ ಫೆಂಗಲ್ ಚಂಡಮಾರುತದ ಅಬ್ಬರ ರಾಜ್ಯದ ಮೇಲೂ ಪ್ರಭಾವ ಬೀರುತ್ತಿದ್ದು, ಮುಂದಿನ ಮೂರ್ನಾಲ್ಕು ದಿನ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು ಜಿಲ್ಲೆಗಳನ್ನು ಕಾಡುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.


ಶನಿವಾರ ತಡರಾತ್ರಿ ಅಪ್ಪಳಿಸಿದ ‘ಫೆಂಗಲ್’ ಚಂಡಮಾರುತವು ಪುದುಚೇರಿಯ ಇತಿಹಾಸದಲ್ಲೇ ಗರಿಷ್ಟ ದಾಖಲೆಯ ಅತಿ ಹೆಚ್ಚು ಪ್ರಮಾಣದ ಮಳೆ ಸುರಿಸಿದೆ. ಅಂತೆಯೇ ತಮಿಳುನಾಡಿನ ವಿಳ್ಳುಪುರಂ ಜಿಲ್ಲೆಯಲ್ಲೂ ದಾಖಲೆಯ ಮಳೆ ಸುರಿದಿದೆ. ಭಾನುವಾರ ಬೆಳಗ್ಗೆ 7.15 ರವರೆಗೆ ಮೈಲಂ (ವಿಲ್ಲುಪುರಂ) ಮತ್ತು ಪುದುಚೇರಿಯಲ್ಲಿ ಸ್ವಯಂಚಾಲಿತ ಹವಾಮಾನ ಕೇಂದ್ರಗಳು ಕ್ರಮವಾಗಿ 504 ಮಿ.ಮೀ. ಮತ್ತು 490 ಮಿ.ಮೀ. ಮಳೆಯನ್ನು ದಾಖಲಿಸಿವೆ.



























































































































error: Content is protected !!
Scroll to Top