ಹೆಬ್ರಿ : ಅಪರಿಚಿತ ಮೃತದೇಹ ಪತ್ತೆ

ಹೆಬ್ರಿ : ಅಪರಿಚಿತ ಮೃತದೇಹವೊಂದು ಹೆಬ್ರಿಯ ಬೋಗಿ ಹಾಡಿಯಲ್ಲಿ ನ. 30ರಂದು ಪತ್ತೆಯಾಗಿದೆ. ಹೆಬ್ರಿ ಕೆಳಪೇಟೆ ಲಯನ್‌ ಸರ್ಕಲ್‌ನ ಪರಶುರಾಮ ಎಂಬುವವರು ಹೆಬ್ರಿ ಗ್ರಾಮ ಪಂಚಾಯತ್‌ಗೆ ಬಂದು ತನ್ನ ಅಂಗಡಿಯ ಹಿಂದಿನ ಬೋಗಿ ಹಾಡಿಯಲ್ಲಿ ಒಂದು ಅಪರಿಚಿತ ಮೃತದೇಹ ಇರುವುದಾಗಿ ತಿಳಿಸಿದ ಮೇರೆಗೆ ಪಂಚಾಯತ್‌ ಅಧ್ಯಕ್ಷ ತಾರಾನಾಥ್‌ ಅವರು ಸ್ಥಳಕ್ಕೆ ಹೋಗಿ ನೋಡಿದಾಗ ಸುಮಾರು 40 ರಿಂದ 50 ವರ್ಷ ವಯಸ್ಸಿನ ಗಂಡಸಿನ ಮೃತದೇಹ ಅಂಗಾತನೆ ಮಲಗಿರುವ ಸ್ಥಿತಿಯಲ್ಲಿ ಕಂಡುಬಂದಿರುತ್ತದೆ. ಮೃತದೇಹದ ಹೊಟ್ಟೆಯ ಮೇಲ್ಬಾಗ ಹಾಗೂ ಮುಖ ಊದಿಕೊಂಡಿದ್ದು ಭಾಗಶಃ ಕೊಳೆತ ಸ್ಥಿತಿಯಲ್ಲಿದ್ದು ಗುರುತು ಪತ್ತೆಯಾಗಿರುವುದಿಲ್ಲ. ಮೃತದೇಹದಲ್ಲಿ ಬಿಳಿ ಗೆರೆಗಳಿರುವ ನೀಲಿ ಬಣ್ಣದ ಬರ್ಮುಡಾ ಧರಿಸಿದ್ದು ಅಕ್ಕಪಕ್ಕದವರಲ್ಲಿ ಹಾಗೂ ಗ್ರಾಮಸ್ಥರಲ್ಲಿ ವಿಚಾರಿಸಿದಾಗ ಗುರುತು ಪತ್ತೆಯಾಗದೆ ಇದ್ದು ಅಪರಿಚಿತ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡೋ ಅಥವಾ ಇನ್ನಾವುದೋ ಕಾರಣದಿಂದ ಮೃತಪಟ್ಟಿರುವುದಾಗಿ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

































































































error: Content is protected !!
Scroll to Top