ಡಿ. 1 : ಕಾಬೆಟ್ಟು ಶ್ರೀ ವೇಣುಗೋಪಾಲಕೃಷ್ಣ ದೇವಸ್ಥಾನದ ದೀಪೋತ್ಸವ

ಕಾರ್ಕಳ : ಕಾಬೆಟ್ಟು ಚೋಪ್ಲಾಡಿಯ ಶ್ರೀ ವೇಣುಗೋಪಾಲಕೃಷ್ಣ ದೇವಸ್ಥಾನದಲ್ಲಿ ಏಕಾಹ ಭಜನೆ ಮತ್ತು ದೀಪೋತ್ಸವ ಡಿ.1 ರಂದು ಜರುಗಲಿದೆ. ಸೂರ್ಯೋದಯದ 6.30ರಿಂದ ಸಂಜೆ ಸೂರ್ಯಾಸ್ತದ 6 ಗಂಟೆಯವರೆಗೆ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸೇವೆ ನೆರವೇರಲಿದೆ. ಸಂಜೆ 6ರಿಂದ ದೀಪಾರಾಧನೆ, 7ರಿಂದ 8ರವರೆಗೆ ವಿಶೇಷ ಭಜನೆ, ರಾತ್ರಿ 8ಕ್ಕೆ ದೀಪೋತ್ಸವ, ರಂಗಪೂಜೆ, ನಂತರ ಪ್ರಸಾದ ವಿತರಣೆ ನಡೆಯಲಿದೆ ಎಂದು ಕ್ಷೇತ್ರದ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.









































































































error: Content is protected !!
Scroll to Top