ಪಾದಚಾರಿಗೆ ಬೈಕ್‌ ಡಿಕ್ಕಿ – ಸವಾರ ಪರಾರಿ

ಕಾರ್ಕಳ : ಬೈಕ್‌ ಡಿಕ್ಕಿಯಾಗಿ ಪಾದಚಾರಿ ಗಾಯಗೊಂಡ ಘಟನೆ ನ. 22ರಂದು ಬೆಳ್ಮಣ್‌ನಲ್ಲಿ ಸಂಭವಿಸಿದೆ.
ಬೆಳಿಗ್ಗೆ 10:30ಕ್ಕೆ ಬೆಳ್ಮಣ್‌ ಸೊಸೈಟಿ ಬಳಿ ಹಾದು ಹೋಗಿರುವ ಕಾರ್ಕಳ ಪಡುಬಿದ್ರಿ ರಾಜ್ಯ ಹೆದ್ದಾರಿಯಲ್ಲಿ KA20EZ9342 ನೋಂದಾಯಿತ ಬೈಕ್‌ನ್ನು ಅದರ ಸವಾರ ಬೆಳ್ಮಣ್‌ ಚರ್ಚ್‌ ಕಡೆಯಿಂದ ಬೆಳ್ಮಣ್‌ ಪೇಟೆ ಕಡೆಗೆ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಜಗನ್ನಾಥ ಮೂಲ್ಯ (70) ಎಂಬವರಿಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮವಾಗಿ ಜಗನ್ನಾಥ ಅವರು ಗಾಯಗೊಂಡಿದ್ದು, ಸವಾರ ಬೈಕ್‌ ನಿಲ್ಲಿಸದೆ ಪರಾರಿಯಾಗಿದ್ದಾನೆ. ಗಾಯಳುವನ್ನು ಚಿಕಿತ್ಸೆಗಾಗಿ ಟಿಎಂಎಪೈ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.





























































































































error: Content is protected !!
Scroll to Top