ಶಾಲಾ ಬಸ್‌ ಮತ್ತು ಬೈಕ್‌ ಡಿಕ್ಕಿ – ಸವಾರ ಸ್ಥಳದಲ್ಲೇ ಮೃತ್ಯು

ಕಾರ್ಕಳ : ಶಾಲಾ ಬಸ್‌ ಮತ್ತು ಬೈಕ್‌ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನ. 23ರಂದು ಬೆಳಿಗ್ಗೆ ಮಿಯ್ಯಾರು ಕಾರೋಲ್‌ ಗುಡ್ಡೆಯಲ್ಲಿ ಸಂಭವಿಸಿದೆ. ಜೋಡುಕಟ್ಟೆ ನಿವಾಸಿ ಅಜಿತ್‌ ಕುಮಾರ್‌ (24) ಮೃತ ದುರ್ದೈವಿ.
ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ಕಾರ್ಕಳದ ಖಾಸಗಿ ಶಾಲೆಯೊಂದರ ಬಸ್‌ ಮತ್ತು ಅಜಿತ್‌ ಕುಮಾರ್‌ ಸಾಗುತ್ತಿದ್ದ ಬೈಕ್‌ ನಡುವೆ ಬೆಳಿಗ್ಗೆ 7.30ರ ವೇಳೆಗೆ ಕಾರೋಲ್‌ಗುಡ್ಡೆಯಲ್ಲಿ ಡಿಕ್ಕಿಯಾಗಿದೆ. ಪರಿಣಾಮವಾಗಿ ಅಜಿತ್‌ ಸ್ಥಳದಲ್ಲೇ ಉಸಿರು ಚೆಲ್ಲಿದ್ದಾರೆ. ಇನ್ನಷ್ಟು ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.

















































error: Content is protected !!
Scroll to Top